ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಅತ್ಯಂತ ರೋಮಾಂಚಕಾರಿ ರೀತಿಯಲ್ಲಿ ಕೊನೆಗೊಂಡಿದೆ. ಜೂನ್ 20 ರಂದು ಲೀಡ್ಸ್ನಲ್ಲಿ ಪ್ರಾರಂಭವಾದ ಈ ಟೆಸ್ಟ್ ಸರಣಿಯು ಆಗಸ್ಟ್ 4 ರಂದು ಓವಲ್ನಲ್ಲಿ ನಡೆದ ಕೊನೆಯ ಟೆಸ್ಟ್ನ ಕೊನೆಯ ಇನ್ನಿಂಗ್ಸ್ನೊಂದಿಗೆ ಕೊನೆಗೊಂಡಿತು.
ಓವಲ್ ಟೆಸ್ಟ್ನ ಫಲಿತಾಂಶವು ಸರಣಿಯ ಸ್ಕೋರ್ಲೈನ್ನ ಮೇಲೆ ಪರಿಣಾಮ ಬೀರಿದ್ದು ಮಾತ್ರವಲ್ಲದೆ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಪಾಯಿಂಟ್ ಪಟ್ಟಿಯಲ್ಲಿಯೂ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿದೆ.
ಇದೀಗ ಓವಲ್ ಟೆಸ್ಟ್ನಲ್ಲಿ ಟೀಂ ಇಂಡಿಯಾದ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲೂ ಬದಲಾವಣೆಗಳಾಗಿವೆ. ಐದನೇ ಟೆಸ್ಟ್ನಲ್ಲಿನ ಗೆಲುವಿನ ನಂತರ, ಟೀಂ ಇಂಡಿಯಾ 28 ಅಂಕಗಳು ಮತ್ತು 46.67 ಗೆಲುವಿನ ಶೇಕಡಾವಾರುವಿನೊಂದಿಗೆ ಮೂರನೇ ಸ್ಥಾನ್ಕಕೇರಿದರೆ, ಇತ್ತ ಇಂಗ್ಲೆಂಡ್ ಕೇವಲ 26 ಅಂಕಗಳು ಮತ್ತು 43.33 ಗೆಲುವಿನ ಶೇಕಡಾವಾರುವಿನೊಂದಿಗೆ ಕುಸಿದು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.