15 ವರ್ಷ ಹಿಂದೆ 15 ವರ್ಷದ ಹುಡುಗಿಯ ಶವ ದಫನ: ಎಸ್‌ಐಟಿ ಮುಂದೆ ಮತ್ತೊಂದು ದೂರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಮಾರು 15 ವರ್ಷಗಳ ಹಿಂದೆ 15 ವರ್ಷದ ಹೆಣ್ಣುಮಗಳೊಬ್ಬಳ ಅನುಮಾನಾಸ್ಪದ ಸಾವಾಗಿದೆ. ಆಕೆಯ ಹೆಣವನ್ನು ಯಾವುದೇ ಕಾನೂನು ಪ್ರಕ್ರಿಯೆ ನಡೆಸದ ಹೂತು ಹಾಕಲಾಗಿದೆ ಎಂದು ಜಯಂತ್ ಟಿ. ಎಂಬುವರು ಎಸ್‌ಐಟಿಗೆ ದೂರು ನೀಡಿದ್ದಾರೆ.

ಈ ಘಟನೆಯನ್ನು ತಾನು ಸ್ವತಃ ನೋಡಿದ್ದೇನೆ. ನಾನು ಯಾವುದೇ ಕ್ಷೇತ್ರದ ಮೇಲೆ ಆರೋಪ ಮಾಡುತ್ತಿಲ್ಲ. ಪೋಲಿಸ್ ಅಽಕಾರಿಯೊಬ್ಬರ ಮೇಲೆ ಆರೋಪ ಮಾಡುತ್ತಿದ್ದೇನೆ. ಇದಕ್ಕೆ ಬೇಕಾದ ಬೇರೆ ಸಾಕ್ಷಿದಾರರೂ ಇದ್ದಾರೆ. ತನಿಖೆಯ ವೇಳೆ ನಾನು ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿಗೆ ಸಂಬಂಽಸಿ ಎಸ್‌ಐಟಿ, ಜಯಂತ್ ಟಿ. ಅವರಿಗೆ ಹಿಂಬರಹ ನೀಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಸೂಚಿಸಲಾಗಿದೆ. ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಡಿಜಿ, ಐಜಿಪಿ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ದೂರಿನಲ್ಲಿ ಏನಿದೆ?
2002-03ರ ಅವಧಿಯಲ್ಲಿ ರಾಜ್ಯ ಹೆದ್ದಾರಿ 37ರ ಅರಣ್ಯದಲ್ಲಿ ಮೃತದೇಹವೊಂದನ್ನು ಎಸೆದು ಹೋಗಲಾಗಿತ್ತು. ಈ ವಿಷಯವನ್ನು ಸ್ಥಳೀಯ ನಿವಾಸಿ ಬೆಳ್ತಂಗಡಿ ಇನ್ಸ್‌ಪೆಕ್ಟರ್‌ಗೆ ತಿಳಿಸಲಾಗಿತ್ತು. ಘಟನೆ ನಡೆದು ಒಂದು ವಾರದ ನಂತರ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಬಂದಿದ್ದಾರೆ. ಇದು 35 ರಿಂದ 40 ವರ್ಷ ಹೆಂಗಸಿನ ಶವ ಎಂದು ಸ್ಥಳೀಯರಿಗೆ ಮಾಹಿತಿ ನೀಡಲಾಗಿತ್ತು. ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿತ್ತು. ಒಂದರಿಂದ ಎರಡು ಫೀಟ್ ಆಳದ ಹೊಂಡ ತೆಗೆದು ಹೂತು ಹಾಕಿದ್ದಾರೆ. ಅದರೆ ಮೃತಪಟ್ಟ ಹೆಣ್ಣುಮಗಳ ಪ್ರಾಯ ಸುಮಾರು 13 ರಿಂದ 15 ವರ್ಷ ಆಗಿರುತ್ತದೆ. ಅರಣ್ಯ ಪ್ರದೇಶದಲ್ಲಿ ಸಿಕ್ಕ ಮೃತದೇಹದ ಬಗ್ಗೆ ನಿರ್ಲಕ್ಷ್ಯವಹಿಸಲಾಗಿದೆ. ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಮೃತದೇಹ ಸಿಕ್ಕ ಸ್ಥಳದ ಮಹಜರು ಮಾಡಿಲ್ಲ.ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಎಫ್.ಐ.ಆರ್. ದಾಖಲು ಮಾಡದಿದ್ದರೆ ಎಸ್‌ಐಟಿ ಕಚೇರಿ ಮುಂದೆ ಧರಣಿ ಕೂರುತ್ತೇನೆ ಎಂದು ಜಯಂತ ಟಿ. ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!