ಹೊಸದಿಗಂತ ಡಿಜಿಟಲ್ ಡೆಸ್ಕ್:
ರಜನಿಕಾಂತ್ ನಟನೆಯ ಕೂಲಿ ಸಿನಿಮಾಗೆ ದೇಶದಾದ್ಯಂತವಷ್ಟೇ ಅಲ್ಲದೇ ವಿದೇಶದಲ್ಲೂ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಹೈಪ್ ಕ್ರಿಯೇಟ್ ಮಾಡಿರೋ ಕೂಲಿ ಸಿನಿಮಾ ನಾರ್ತ್ ಅಮೆರಿಕಾದ ಪ್ರೀಮಿಯರ್‌ಗೆ ಭರ್ಜರಿ ಹವಾ ಸೃಷ್ಟಿಸಿದೆ.
ನಾರ್ತ್ ಅಮೆರಿಕಾದಲ್ಲಿ ಪ್ರೀಮಿಯರ್‌ಗೆ ಬುಕ್ಕಿಂಗ್ ಓಪನ್ ಆಗಿ ಕೆಲವೇ ಗಂಟೆಯಲ್ಲೇ 35 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿದೆ. ಈ ಮೂಲಕ ಹೊಸ ದಾಖಲೆಯತ್ತ ಸಾಗಿದೆ ಕೂಲಿ.
ಲೊಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬಂದ ವಿಜಯ್ ದಳಪತಿ ನಟನೆಯ ಲಿಯೋ ಸಿನಿಮಾ ಇದೇ ನಾರ್ತ್ ಅಮೆರಿಕಾದ ಪ್ರೀಮಿಯರ್‌ಗೆ 30 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿತ್ತು. ಇದೀಗ ಕೂಲಿ ಸಿನಿಮಾ, ವಿಜಯ್ ದಳಪತಿ ಸಿನಿಮಾಕ್ಕಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಆಗಷ್ಟ್ 13ರಂದು ನಡೆಯಲಿರುವ ಪ್ರೀಮಿಯರ್‌ಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗ್ತಿದೆ.