ಮನೆಮಂದಿಯ ಆರೋಗ್ಯ ಮತ್ತು ಮನೆಯಲ್ಲಿ ಶಾಂತಿ, ಸಮೃದ್ಧಿಗೆ ನೀಡುವ ಹಲವು ವೈಜ್ಞಾನಿಕ ಹಾಗೂ ಜ್ಯೋತಿಷ್ಯಾಧಾರಿತ ಉಪಾಯಗಳಿವೆ. ದಿನದಿಂದ ದಿನಕ್ಕೆ ಮನೆಗಳಲ್ಲಿ ಉಂಟಾಗುವ ಸಮಸ್ಯೆಗಳು, ಋಣಾತ್ಮಕ ಶಕ್ತಿ ಹೆಚ್ಚಾಗುತ್ತಿರುವುದಕ್ಕೆ ಸರಳವಾದ ಪರಿಹಾರಗಳಿವೆ ಎಂದು ಜ್ಯೋತಿಷ್ಯ ತಜ್ಞರು ಸಲಹೆ ನೀಡುತ್ತಿದ್ದಾರೆ.
ಉತ್ತರ ದಿಕ್ಕಿನ ಮಲಗುವ ಕೋಣೆ
ಕುಬೇರನ ಅಧಿಪತ್ಯವಿರುವ ಉತ್ತರ ದಿಕ್ಕಿನಲ್ಲಿ ಮಲಗುವ ಕೋಣೆ ನಿರ್ಮಾಣ ಮಾಡುವುದು ಉತ್ತಮ. ಈ ಕೋಣೆಯಲ್ಲಿ ಹಾಸಿಗೆಯ ತಲೆಭಾಗವು ಉತ್ತರ ದಿಕ್ಕಿಗೆ ಇರಬೇಕು. ಇದರಿಂದ ಉತ್ತಮ ನಿದ್ರೆ ಸಿಗುತ್ತದೆ, ದೈಹಿಕ ಆರೋಗ್ಯ ಸುಧಾರಿಸುತ್ತದೆ.
ಈಶಾನ್ಯ ದಿಕ್ಕಿನಲ್ಲಿ ಶುಚಿ ನೀರಿನ ಪಾತ್ರೆ
ಚಂದ್ರನ ಪ್ರಭಾವವಿರುವ ಈಶಾನ್ಯ ದಿಕ್ಕಿನಲ್ಲಿ ಶುದ್ಧ ನೀರಿನ ಪಾತ್ರೆ ಅಥವಾ ಫೌಂಟನ್ ಇಡುವುದು ಉತ್ತಮ. ಇದು ಮನಸ್ಸಿಗೆ ಶಾಂತಿ ನೀಡುತ್ತದೆ ಹಾಗೂ ಕುಟುಂಬದ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಕೊಳಕಾದ ನೀರನ್ನು ಈ ಭಾಗದಲ್ಲಿ ಇಡಬಾರದು.
ಅಗ್ನಿದೇವನ ದಿಕ್ಕಿನಲ್ಲಿ ಅಡುಗೆ ಮನೆ
ಆಗ್ನೇಯ ದಿಕ್ಕು ಅಗ್ನಿದೇವನಿಗೆ ಸಮರ್ಪಿತವಾಗಿದ್ದು, ಅಡುಗೆ ಮನೆ ಮತ್ತು ಒಲೆ ಈ ದಿಕ್ಕಿನಲ್ಲಿ ಇರಬೇಕು. ಇದು ಜೀರ್ಣಕ್ರಿಯೆ ಸುಧಾರಿಸಲು ಸಹಾಯಮಾಡುತ್ತದೆ. ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ನೀರಿನ ಅರ್ಭಿಷೇಕ ಮಾಡುವದು ಆರೋಗ್ಯಕ್ಕೆ ಶ್ರೇಷ್ಟ.
ಪೂಜಾ ಕೊಠಡಿ ಈಶಾನ್ಯ ದಿಕ್ಕಿನಲ್ಲಿ
ಗುರುಗ್ರಹದ ಶಕ್ತಿಯನ್ನು ಪ್ರತಿಬಿಂಬಿಸುವ ಈಶಾನ್ಯ ದಿಕ್ಕಿನಲ್ಲಿ ಪೂಜಾ ಕೊಠಡಿ ನಿರ್ಮಾಣ ಮಾಡಬೇಕು. ತುಳಸಿ ಗಿಡವನ್ನು ಇಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ, ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.
ಈ ಸರಳ ವಾಸ್ತು ಕ್ರಮಗಳನ್ನು ಅನುಸರಿಸುವುದರಿಂದ ಮನೆಗೆ ಆರೋಗ್ಯ, ಶಾಂತಿ ಮತ್ತು ಸಮೃದ್ಧಿಯು ಬರಲಿದೆ ಎಂದು ನಂಬಲಾಗಿದೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)