ಹೊಸದಿಗಂತ ವರದಿ, ಸೋಮವಾರಪೇಟೆ:
ಪಟ್ಟಣದಲ್ಲಿ ಇಂದು ಸಂಜೆ ಧಾರಾಕಾರ ಮಳೆ ಸುರಿದು ಅವಾಂತರ ಸೃಷ್ಟಿಸಿದೆ.
ಬೆಳಗಿನಿಂದ ಸಾದಾರಣ ಬಿಸಿಲಿನ ವಾತಾವರಣವಿದ್ದು ಮಳೆ ಬರುವ ಕುರುಹೂ ಇರಲಿಲ್ಲ. ಸಂಜೆ 4 ಗಂಟೆಯ ನಂತರ ಇದ್ದಕಿದ್ದಂತೆ ಧಾರಾಕಾರವಾಗಿ ಸುರಿಯಲಾರಂಭಿಸಿತು. ಒಂದಷ್ಟು ಹೊತ್ತು ವಾಹನಗಳು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪಟ್ಟಣದ ಅಲೆಕಟ್ಟೆರಸ್ಟೆಯ ಆರ್.ಎಂ.ಸಿ ಮಾರುಕಟ್ಟೆ ಮುಂಬಾಗದಲ್ಲಿ ಕಕ್ಕೆ ಸೇರುವ ಕೊಲ್ಲಿ ಕಟ್ಟಿಕೊಂಡ ಪರಿಣಾಮ ಪಕ್ಕದಲ್ಲಿಯೇ ಇಡಿ ಅಡುಗೆ ನಿಂಗರಾಜು ಎಂಬುವರ ಮನೆಯೊಳಗೆ ನೀರುನುಗ್ಗಿ,ಮನೆ,ವಾಹನಗಳು ಜಲಾವೃತಗೊಂಡು ಮನೆಯ ಹಲವು ವಸ್ತುಗಳು ನೀರಿಗೆ ಆಹುತಿಯಾಗಿದೆ.
ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.