ಹೊಸದಿಗಂತ ಡಿಜಿಟಲ್ ಡೆಸ್ಕ್:
ಜು.30 ರಂದು ಕಲಬುರಗಿಯ ಜೈನ ಸಮುದಾಯದ ಬಿಎಸ್ಸಿ ಪದವೀಧರೆ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಹಿಂದೂ ಸಂಘಟನೆಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಗೊಬ್ಬುರ ಗ್ರಾಮದ ಮಹಾವೀರ ಜೈನ್ ಎಂಬುವರ ಪುತ್ರಿ ನಾಪತ್ತೆಯಾಗಿದ್ದಾರೆ. ಈಕೆ ನಗರದ ಖಾಸಗಿ ಕಾಲೇಜವೊಂದರಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಜು.30ರಂದು ಬಿಎಸ್ಸಿ ಪರೀಕ್ಷೆ ಬರೆಯಲು ಬರೆಯೋದಕ್ಕಾಗಿ ಕಾಲೇಜಿಗೆ ಬಂದಿದ್ದ ಯುವತಿ ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದಾಳೆ ಎಂದು ವರದಿಯಾಗಿತ್ತು.
ನಾಪತ್ತೆಯಾಗಿರುವ ಯುವತಿ ಗೊಬ್ಬರ ಗ್ರಾಮದ ಮಶಾಕ್ ಎಂಬಾತನೊಂದಿಗೆ ಮೆಸೇಜ್ ಮಾಡ್ತಿದ್ದಳು ಎನ್ನಲಾಗಿದೆ. ಅನ್ಯಕೋಮಿನ ಯುವಕನೊಂದಿಗೆ ಮೆಸೇಜ್ ಮಾಡ್ತಿದ್ದಕ್ಕೆ ಮಗಳಿಗೆ ಬೈದು ಕಾಲೇಜು ಬಿಡಿಸಿ, ಪರೀಕ್ಷೆ ಬರೆಯೋದಕ್ಕೆ ಮಾತ್ರ ಪೋಷಕರು ಕಳುಹಿಸಿದ್ದರು. ಈಗ ಯುವತಿ ಅದೇ ಗ್ರಾಮದ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.
ಯುವತಿ ನಾಪತ್ತೆಯಾದ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.