February 8, 2026
Sunday, February 8, 2026
spot_img

ನೆರೆ ರಾಜ್ಯಗಳಲ್ಲಿ ಹಕ್ಕಿ ಜ್ವರದ ಅಬ್ಬರ: ಕರ್ನಾಟಕದ ಗಡಿಯಲ್ಲಿ ಹೈ ಅಲರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ H5N1 (ಹಕ್ಕಿ ಜ್ವರ) ವೈರಸ್ ವೇಗವಾಗಿ ಹರಡುತ್ತಿದ್ದು, ಈಗ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಆತಂಕದ ಛಾಯೆ ಆವರಿಸಿದೆ. ತಮಿಳುನಾಡಿನಲ್ಲಿ ಈಗಾಗಲೇ 1,500ಕ್ಕೂ ಹೆಚ್ಚು ಕಾಗೆಗಳು ಬಲಿಯಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಕೈಗನ್ನಡಿಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪಶುಸಂಗೋಪನಾ ಇಲಾಖೆಯು ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸೂಚನೆ ನೀಡಿದೆ.

ಇದು ಪಕ್ಷಿಗಳಲ್ಲಿ ಕಾಣಿಸಿಕೊಳ್ಳುವ ತೀವ್ರ ಸ್ವರೂಪದ ಸಾಂಕ್ರಾಮಿಕ ರೋಗ. ಸೋಂಕಿತ ಪಕ್ಷಿಗಳ ಲಾಲಾರಸ, ಮಲ ಅಥವಾ ನೇರ ಸಂಪರ್ಕದಿಂದ ಇದು ಮನುಷ್ಯರಿಗೂ ಹರಡಬಲ್ಲದು. ವಿಶೇಷವಾಗಿ ಪೌಲ್ಟ್ರಿ ಫಾರಂ ಹಾಗೂ ವೆಟರ್ನರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸೋಂಕು ತಗುಲುವ ಅಪಾಯ ಹೆಚ್ಚಿದೆ.

ಸೋಂಕಿತ ಹಕ್ಕಿಯ ಸಂಪರ್ಕಕ್ಕೆ ಬಂದ 4 ರಿಂದ 6 ದಿನಗಳಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು:

ತೀವ್ರ ಜ್ವರ, ಕೆಮ್ಮು ಮತ್ತು ಗಂಟಲು ನೋವು.

ಉಸಿರಾಟದ ತೊಂದರೆ ಮತ್ತು ನ್ಯೂಮೋನಿಯಾ.

ಕಣ್ಣು ಕೆಂಪಾಗುವುದು ಹಾಗೂ ಕಿರಿಕಿರಿ.

ತಲೆನೋವು, ಸ್ನಾಯು ನೋವು ಮತ್ತು ವಿಪರೀತ ಆಯಾಸ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !