ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಕರಾವಳಿ ಸೇರಿ 23 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಕೂಡ ಕಳೆದ ನಾಲ್ಕು ದಿನಗಳಿಂದ ಅಬ್ಬರದ ಮಳೆಯಲ್ಲದಿದ್ದರೂ ಸಾಧಾರಣ ಮಳೆಯಾಗುತ್ತಿದೆ. ಆಗಸ್ಟ್ 10ರವರೆಗೂ ಮಳೆ ಮುಂದವರೆಯಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ಕೋಲಾರ, ಹಾಸನ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯಪುರ, ಮಂಕಿ, ಲಕ್ಷ್ಮೇಶ್ವರ, ಬೆಳ್ತಂಗಡಿ, ಗೇರುಸೊಪ್ಪ, ಸಿದ್ದಾಪುರ, ಅಂಕೋಲಾ, ಕದ್ರಾ, ಶಿರಹಟ್ಟಿ, ತಾವರಗೇರಾ, ಬೀದರ್, ಹುನಗುಂದ, ಬೆಳ್ಳಟ್ಟಿ, ದೇವರಹಿಪ್ಪರಗಿ, ಲೋಕಾಪುರ, ಗುಳೇಗೋಡು,ರಾಂಪುರ, ಬಾಳೆಹೊನ್ನೂರು, ಕಳಸ, ಬೆಳ್ಳೂರು, ಹಗರಿಬೊಮ್ಮನಹಳ್ಳಿ, ಹಿರಿಯೂರು, ಜಯಪುರದಲ್ಲಿ ಹೆಚ್ಚು ಮಳೆಯಾಗಿದೆ.