ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಊಟ ಅಥವಾ ತಿಂಡಿ ಯಾವುದು ಇರಲಿ, ಅದಕ್ಕೆ ಜೊತೆಯಾಗಿ ಸಿಹಿ, ಖಾರ ಸ್ವಾದವನ್ನು ಹೆಚ್ಚಿಸೋ ಚಟ್ನಿಗಳಿರುವುದು ಅತ್ಯಾವಶ್ಯಕ. ನಾನಾ ಬಗೆಯ ಚಟ್ನಿಗಳ ಪೈಕಿ ಈರುಳ್ಳಿ ಚಟ್ನಿಯು ಅತ್ಯಂತ ಜನಪ್ರಿಯವಾಗಿದೆ. ಇಂದು ನಾವು ಹೇಳುತ್ತಿರುವ ಈರುಳ್ಳಿ ಚಟ್ನಿಯ ವಿಧಾನವು ಅತಿ ಕಡಿಮೆ ಪದಾರ್ಥಗಳಿಂದ ಕೂಡಿದ್ದು, ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುವವುದಾಗಿದೆ.
ಬೇಕಾಗುವ ಪದಾರ್ಥಗಳು:
ಈರುಳ್ಳಿ -2
ತೆಂಗಿನತುರಿ- 1ಕಪ್
ಹಸಿಮೆಣಸು 2 – 3
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ- 4 ಟೀ ಸ್ಪೂನ್
ಸಾಸಿವೆ- 1 ಟೀ ಸ್ಪೂನ್
ಬೆಳ್ಳುಳ್ಳಿ-1
ಜೀರಿಗೆ- ಅರ್ಧ ಟೀ ಸ್ಪೂನ್
ಕರೀಬೇವು- ಸ್ವಲ್ಪ
ಹುಣಸೆಹಣ್ಣು- ಸ್ವಲ್ಪ
ಕೊತ್ತಂಬರಿ ಸೊಪ್ಪು
ಕೆಂಪು ಮೆಣಸು-೨
ಮಾಡುವ ವಿಧಾನ:
ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸು, ಕೆಂಪು ಮೆಣಸು ಹಾಗೂ ತೆಂಗಿನ ತುರಿ ಹಾಕಿ ಮಧ್ಯಮ ತಾಪದಲ್ಲಿ ಫ್ರೈ ಮಾಡಬೇಕು. ಈ ಮಿಶ್ರಣವನ್ನು ತಣ್ಣಗಾದ ನಂತರ ಮಿಕ್ಸಿಯಲ್ಲಿ ಕೊತ್ತಂಬರಿ ಸೊಪ್ಪು ಜೊತೆಗೆ ರುಬ್ಬಿಕೊಳ್ಳಬೇಕು.
ಇದಾದ ನಂತರ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಒಗ್ಗರಣೆ ಮಾಡಿ, ರುಬ್ಬಿದ ಚಟ್ನಿ, ಉಪ್ಪು ಹಾಗೂ ಹುಣಸೆಹಣ್ಣು ಸೇರಿಸಿ ಹುರಿಯಬೇಕು. ಹೀಗೆ ಸಿದ್ಧವಾಗುವ ಈ ಚಟ್ನಿಯು ಇಡ್ಲಿ, ದೋಸೆ, ಅಕ್ಕಿ ರೊಟ್ಟಿ ಅಥವಾ ಚಪಾತಿಯೊಂದಿಗೆ ಸವಿಯಬಹುದು.