ಹೊಸದಿಗಂತ ಡಿಜಿಟಲ್ ಡೆಸ್ಕ್ :
ಹೆಣ್ಣುಮಕ್ಕಳ ನೆಚ್ಚಿನ ಹಬ್ಬ ವರಮಹಾಲಕ್ಷ್ಮಿ. ನಾಳೆ ಈ ಹಬ್ಬದ ಆಚರಣೆ ಮಾಡಲಾಗುವುದು, ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹಣ್ಣು, ಹೂವಿನ ಶಾಪಿಂಗ್ಗೆ ಜನ ಮುಗಿಬಿದ್ದಿದ್ದಾರೆ.
ಹೊಸ ಸೀರೆ, ಅರಿಶಿಣ, ಕುಂಕುಮ, ಬಳೆ, ಹೂವು, ಹಣ್ಣು, ಎಲೆ, ಅಡಿಕೆ ಈ ಹಬ್ಬಕ್ಕೆ ಅವಶ್ಯವಾಗಿದ್ದು, ಜನ ಅದ್ಧೂರಿ ಹಬ್ಬಕ್ಕೆ ತಯಾರಾಗಿದ್ದಾರೆ.
ಇತ್ತ ಕೆಆರ್ ಮಾರ್ಕೆಟ್ನಲ್ಲಿ ಜನ ತುಂಬಿದ್ದು, ಹೂವು ಹಣ್ಣು ಖರೀದಿ ಜೋರಾಗಿದೆ. ಸೇವಂತಿಗೆ, ಚೆಂಡುಹೂವಿನ ರೇಟ್ ಕೆಜಿಗೆ 300 ರೂಪಾಯಿ ಇದೆ, ಇನ್ನು ಗುಲಾಬಿ ಕೆಜಿಗೆ350ರಂತೆ ಮಾರಾಟವಾಗುತ್ತಿದೆ.
ಜನದಟ್ಟಣೆ ಹೆಚ್ಚಾದ ಕಾರಣ ಕೆಆರ್ ಮಾರುಕಟ್ಟೆ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಮಾರುಕಟ್ಟೆ ಫ್ಲೈಓವರ್, ಕಲಾಸಿಪಾಳ್ಯ ರಸ್ತೆ, ಟೌನ್ಹಾಲ್, ಕಾರ್ಪೋರೇಷನ್, ಮೈಸೂರು ರಸ್ತೆ, ಜೆಸಿ.ರಸ್ತೆ, ಚಾಮರಾಜಪೇಟೆ ಸೇರಿದಂತೆ ಮಾರುಕಟ್ಟೆಗೆ ಸಂಪರ್ಕ ಕಲ್ಲಿಸುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.