ವಯಸ್ಸು ಅಥವಾ ಲೈಫ್ಸ್ಟೈಲ್ ಏನೇ ಇರಲಿ, ಆರೋಗ್ಯಕರ ಜೀವನಕ್ಕೆ ಬೆಳಗಿನ ಉಪಹಾರದಲ್ಲಿ ಪೌಷ್ಟಿಕ ಆಹಾರ ತೆಗೆದುಕೊಳ್ಳುವುದು ಬಹಳ ಮುಖ್ಯ. ಇದರಲ್ಲಿ ಬಾಳೆಹಣ್ಣು (Banana) ಒಂದು ಸರಳ, ಆದರೆ ಶಕ್ತಿದಾಯಕ ಆಯ್ಕೆ. ಬಾಳೆಹಣ್ಣು ಖಾಲಿ ಹೊಟ್ಟೆಯಲ್ಲಿ ಅಥವಾ ಉಪಹಾರ ಭಾಗವಾಗಿ ಸೇವಿಸಿದರೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇಲ್ಲಿದೆ ಬೆಳಗಿನ ಉಪಹಾರಕ್ಕೆ ಬಾಳೆಹಣ್ಣು ಸೇವನೆಯ ಮುಖ್ಯ ಲಾಭಗಳು:
ತ್ವರಿತ ಶಕ್ತಿ ಮತ್ತು ಹೊಟ್ಟೆತುಂಬಿದ ಭಾವನೆ:
ಬಾಳೆಹಣ್ಣು ನೈಸರ್ಗಿಕ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳಲ್ಲಿ ಸಮೃದ್ಧವಾಗಿದೆ. ಬೆಳಿಗ್ಗೆ ಇದನ್ನು ತಿನ್ನುವುದರಿಂದ ದೇಹಕ್ಕೆ ತ್ವರಿತ ಶಕ್ತಿ ದೊರೆಯುತ್ತದೆ. ಜೊತೆಗೆ, ಇದು ಫೈಬರ್ನಲ್ಲೂ ಶ್ರೀಮಂತವಾಗಿರುವುದರಿಂದ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ.
ಜೀರ್ಣಕ್ರಿಯೆಗೆ ಸಹಾಯಕ:
ಹಸಿರು ಬಾಳೆಹಣ್ಣುಗಳಲ್ಲಿ ನಿರೋಧಕ ಪಿಷ್ಟ (resistant starch) ಎಂಬ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ದೀರ್ಘಗೊಳಿಸುತ್ತದೆ ಮತ್ತು ಜೀರ್ಣಕ್ಕೆ ಸಹಾಯ ಮಾಡುತ್ತದೆ. ಅಜೀರ್ಣ, ಗ್ಯಾಸು, ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯಕ್ಕೆ ಉತ್ತಮ:
ಬಾಳೆಹಣ್ಣುಗಳಲ್ಲಿ ಹೆಚ್ಚು ಪ್ರಮಾಣದ ಪೊಟ್ಯಾಸಿಯಮ್ ಇದೆ. ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಜೊತೆಗೆ ವಿಟಮಿನ್ C ಉರಿಯೂತ ನಿಯಂತ್ರಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಬೆಂಬಲಿಸಲು ಸಹಕಾರಿಯಾಗುತ್ತದೆ.
ತೂಕ ನಷ್ಟಕ್ಕೆ ಸಹಾಯಕ:
ಬಾಳೆಹಣ್ಣಿನ ಫೈಬರ್ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ, ಇದರೊಂದಿಗೆ ಪ್ರೋಟೀನ್ ಅಥವಾ ಹೃದಯಕ್ಕೆ ಆರೋಗ್ಯಕರವಾದ ಕೊಬ್ಬುಗಳ ಆಹಾರವನ್ನು ಇದರೊಂದಿಗೆ ತಿಂದರೆ ತೃಪ್ತಿ ಹೆಚ್ಚು, ಆಹಾರದ ಮೇಲೆ ನಿಯಂತ್ರಣ ವೃದ್ಧಿಯಾಗುತ್ತದೆ. ಇದರಿಂದ ತೂಕ ಇಳಿಕೆಗೆ ಸಹಾಯವಾಗಬಹುದು.
ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಕೆಲವೊಮ್ಮೆ ರಕ್ತದಲ್ಲಿನ ಶರ್ಕರವನ್ನು ತಕ್ಷಣವೇ ಹೆಚ್ಚಿಸಬಹುದು. ಆದ್ದರಿಂದ ಇದನ್ನು ನಟ್ಸ್ ಅಥವಾ ಶೇಕ್ನೊಂದಿಗೆ ಸೇವಿಸಿದರೆ ಉತ್ತಮ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)