ಪಾಕ್ ಮೂಲದ ಉಗ್ರರ ಸಂಚು ವಿಫಲಗೊಳಿಸಿದ ಪಂಜಾಬಿನ ದರೋಡೆಕೋರ ವಿರೋಧಿ ಕಾರ್ಯಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಂಜಾಬಿನ ದರೋಡೆಕೋರ ವಿರೋಧಿ ಕಾರ್ಯಪಡೆ ( AGTF)ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ನ ಪ್ರಮುಖ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದೆ.

ಪಾಕಿಸ್ತಾನದಿಂದ ಪ್ರಬಲ ಸ್ಫೋಟಕ ಸಾಧನ ( ಐಇಡಿ) ರವಾನೆಯ ಕುರಿತು ದೊರತ ಗುಪ್ತಚರ ಮಾಹಿತಿ ಆಧಾರದ ಮೇಲೆ AGTF ತಂಡಗಳು ಸ್ಥಳೀಯ ಪೊಲೀಸರೊಂದಿಗೆ ತರ್ನ್ ತರಣ್ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದವು ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ. ಸುಧಾರಿತ ಸ್ಫೋಟಕ ಸಾಧನವನ್ನು (IED) ವಶಪಡಿಸಿಕೊಂಡಿದೆ.
ಉಗ್ರರ ಸಹಚರರಾದ ರಿಂಡಾ ಮತ್ತು ಲಾಂಡಾ ಅವರಿಗೆ ಕಳುಹಿಸಲು ಉದ್ದೇಶಿಸಲಾಗಿತ್ತು. ಸ್ಪೋಟಕವನ್ನು ವಶಕ್ಕೆ ಪಡೆದ ನಂತರ ಅವುಗಳನ್ನು ಯಶಸ್ವಿಯಾಗಿ ನಿಷ್ಕ್ರೀಯಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಗಡಿ ರಾಜ್ಯದಲ್ಲಿ ಅಮಾಯಕ ಜನರನ್ನು ಗುರಿಯಾಗಿಟ್ಟುಕೊಂಡು ಸಾರ್ವಜನಿಕ ನೆಮ್ಮದಿ ಹಾಳುವ ಮಾಡುವ ಉದ್ದೇಶದಿಂದ ಐಇಡಿಯನ್ನು ಪಂಜಾಬ್ ಗೆ ಕಳುಹಿಸಲಾಗುತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು AGTF ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಮೋದ್ ಬಾನ್ ತಿಳಿಸಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 111 ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3, 4 ಮತ್ತು 5 ಅಡಿಯಲ್ಲಿ ತರನ್ ತರನ್‌ನಲ್ಲಿರುವ ಸಿರ್ಹಾಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಎಜಿಟಿಎಫ್ ಗುರ್ಮೀತ್ ಸಿಂಗ್ ಚೌಹಾಣ್ ಖಚಿತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!