ವಿಭಿನ್ನ ಸುಗಂಧಗಳ ಬಳಕೆ ಇಂದು ಎಲ್ಲಾ ವಯಸ್ಸಿನ ಜನರಲ್ಲಿ ಸಾಮಾನ್ಯವಾಗಿದೆ. ಆದರೆ ಡಿಯೋಡರೆಂಟ್ (Deodorant) ಮತ್ತು ಪರ್ಫ್ಯೂಮ್ (Perfume) ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ ಎಂಬುದನ್ನು ಹಲವರು ಅರ್ಥಮಾಡಿಕೊಳ್ಳುವುದಿಲ್ಲ. ಎರಡು ಉತ್ಪನ್ನಗಳೂ ದುರ್ಗಂಧ ತಡೆಯಲು ಸಹಾಯಕವಾಗಿದ್ದರೂ, ಅವುಗಳ ಬಳಕೆ ವಿಧಾನ, ಉದ್ದೇಶ ಮತ್ತು ಪರಿಣಾಮದಲ್ಲಿ ತುಂಬಾ ವ್ಯತ್ಯಾಸವಿದೆ.
ಡಿಯೋಡರೆಂಟ್ ದೇಹದ ದುರ್ಗಂಧ ತಡೆಯುವ ಸಾಧನ. ಇದನ್ನು ಸಾಮಾನ್ಯವಾಗಿ ಬೆವರು ಬರುವ ಸ್ಥಳಗಳಾದ ಕಂಕುಳು, ಕುತ್ತಿಗೆ, ಮುಡಿಕಟ್ಟಿನ ಮೇಲೆ ನೇರವಾಗಿ ಹಚ್ಚಲಾಗುತ್ತದೆ. ಡಿಯೋದಲ್ಲಿ ಆ್ಯಂಟಿ-ಬೈಕ್ಟೀರಿಯಲ್ ಅಂಶಗಳಿದ್ದು, ಬೆವರುದಿಂದ ಉಂಟಾಗುವ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಇದರ ಪರಿಮಳ ಕೆಲ ಗಂಟೆಗಳವರೆಗೆ ಇರುತ್ತದೆ ಮತ್ತು ಸಾಮಾನ್ಯವಾಗಿ ದೈನಂದಿನ ಬಳಕೆಗಾಗಿ ಸೂಕ್ತವಾಗಿದೆ.
ಪರ್ಫ್ಯೂಮ್‌ಗಿಂತ ಡಿಯೋಡರೆಂಟ್ ಕಡಿಮೆ ಪರಿಮಳ ಹೊಂದಿದ್ದು, ಹೆಚ್ಚು ಸಮಯ ಉಳಿಯದು. ಪರ್ಫ್ಯೂಮ್‌ಗಳನ್ನು ಸಾಮಾನ್ಯವಾಗಿ ಬಟ್ಟೆ ಮೇಲೆ ಅಥವಾ ದೇಹದ ಭಾಗಗಳಲ್ಲಿ ಸ್ಪ್ರೆ ಮಾಡಲಾಗುತ್ತದೆ. ಪರ್ಫ್ಯೂಮ್‌ನಲ್ಲಿ ಪರಿಮಳದ ತೀವ್ರತೆ ಹೆಚ್ಚು ಇರುತ್ತದೆ. ಇದು ಕೆಲವೊಮ್ಮೆ ಇಡೀ ದಿನ ನಿಮ್ಮ ಡ್ರೆಸ್ ನಲ್ಲಿರುತ್ತದೆ. ಪರ್ಫ್ಯೂಮ್‌ನಲ್ಲಿ ಅಲ್ಕೊಹಾಲ್ ಪ್ರಮಾಣ ಹೆಚ್ಚು ಇರುತ್ತದೆ.
ಹೆಚ್ಚಿನ ಸಮಯ ಪರಿಮಳ ಉಳಿಯಬೇಕೆಂದರೆ ಪರ್ಫ್ಯೂಮ್ ಉತ್ತಮ ಆಯ್ಕೆ. ಆದರೆ ದಿನನಿತ್ಯದ ತಾಜಾತನಕ್ಕೆ ಮತ್ತು ವ್ಯಾಯಾಮದ ನಂತರ ಬಳಸಲು ಡಿಯೋ ಸೂಕ್ತ. ಸೂಕ್ಷ್ಮ ಚರ್ಮವಿರುವವರು ಡಿಯೋ ಆಯ್ದುಕೊಳ್ಳುವುದು ಒಳಿತು.
ಅಂತಿಮವಾಗಿ, ಉಪಯೋಗಿಸುವ ಸಮಯ, ನಿಮ್ಮ ಚರ್ಮದ ರೀತಿಯ ಮೇರೆಗೆ ಡಿಯೋ ಅಥವಾ ಪರ್ಫ್ಯೂಮ್ ಆರಿಸಿಕೊಳ್ಳಬಹುದು. ದುರ್ಗಂಧ ತಡೆಯಲು ಡಿಯೋ, ಘಮಿಸುಲು ಪರ್ಫ್ಯೂಮ್ ಎಂಬುದನ್ನು ನೆನಪಿಟ್ಟುಕೊಳ್ಳಿ.