ಹೊಸದಿಗಂತ ವರದಿ, ಕಲಬುರಗಿ:
ನಗರದ ಹೊರವಲಯದ ಶರಣ ಶಿರಸಗಿ ಬಳಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿಂದು ಸಹೋದರತ್ವದ ಸಂಕೇತವಾದ ರಕ್ಷಾಬಂಧನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದ ಸಂಘದ ಹಿರಿಯರಾದ ಸಾಗರ್ ಸತಾಳಕರ ಪುಷ್ಪಾರ್ಚನೆ ಮಾಡಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ,ನಾವೆಲ್ಲ ಬಂಧು, ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎಂಬುದನ್ನು ಮಕ್ಕಳಿಂದ ಹೇಳಿಸಿದರು.ರಕ್ಷೇ ಧರಿಸಿದ ನಾವು ರಾಷ್ಟ್ರ ರಕ್ಷಣೆಗೆ ಕಟಿಬದ್ಧರಾಗೋಣ ಎಂದು ಆಶಯವನ್ನು ವ್ಯಕ್ತಪಡಿಸಿದರು.
ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ,ಸಮರಸತೆ ಕಾಪಾಡುವುದಕ್ಕಾಗಿ ಈ ಕಾರ್ಯಕ್ರಮ ಬಹಳ ಅವಶ್ಯಕ ಎಂದು ಅಭಿಪ್ರಾಯ ಪಟ್ಟರು.ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯಕಲಾ, ನಾಟಕ ಪ್ರದರ್ಶನ ನೀಡಿದರು. ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಪರಸ್ಪರ ರಕ್ಷೆ ಕಟ್ಟಿದರು.
ಕಾರ್ಯಕ್ರಮದಲ್ಲಿ ಶಾಲೆಯ ಕರಸ್ಪಾಂಡೆಂಟ ಕೃಷ್ಣ ಜೋಶಿ, ಪ್ರಧಾನಾಚಾರ್ಯ ವಂಶಿಕೃಷ್ಣ, ಆಡಳಿತ ಅಧಿಕಾರಿಗ ಶ್ರೀಕಾಂತ್ ಪಾಟೀಲ್,ಶಿಕ್ಷಣ ಸಂಯೋಜಕ ರವಿಕುಮಾರ್ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಕು.ಶಿಲ್ಪಾ ಸ್ವಾಗತಿಸಿದರು, ಅನುಷಾ .ವಂದಿಸಿದರು, ನಿವೇದಿತಾ ನಿರೂಪಿಸಿದರು.
ಕಾರ್ಯಕ್ರಮದ ನಂತರ ಶರಣ ಸಿರಸಗಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ನಮ್ಮ ಶಾಲೆ ಮಕ್ಕಳಿಂದ ಸರ್ಕಾರಿ ಶಾಲೆಯ ಮಕ್ಕಳಿಗೆಲ್ಲ ರಾಖಿ ಕಟ್ಟಿಸಿ ಹಬ್ಬದ ಮಹತ್ವವನ್ನು ತಿಳಿಸಲಾಯಿತು.