ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಆಗಿದೆ. ಈ ಬಗ್ಗೆ ಎಚ್‌ಡಿ ರೇವಣ್ಣ ಕುಟುಂಬದಿಂದ ಮೊದಲ ಬಾರಿಗೆ ಪ್ರತಿಕ್ರಿಯೆ ಬಂದಿದೆ. ತಮ್ಮ ಪ್ರಜ್ವಲ್ ಬಗ್ಗೆ ಸೂರಜ್ ರೇವಣ್ಣ ಮಾತನಾಡಿ, ಮುಂದಿನ ಕಾನೂನು ನಡೆಯ ಬಗ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೂರಜ್ ರೇವಣ್ಣ, ತೀರ್ಪು ಹೊರ ಬಂದಿದೆ. ಮೇಲ್ಮನವಿ ಸಲ್ಲಿಸುವ ನಿರ್ಧಾರ ಮಾಡಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಏನೂ ಮಾತನಾಡಲು ಆಗುವುದಿಲ್ಲ ಎಂದಿದ್ದಾರೆ.