ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟಕ್ಕೆ ಧಾರಾಲಿ ಗ್ರಾಮ ನೆಲಸಮವಾಗಿದೆ. ಇತ್ತ ಭೀಕರ ಪ್ರವಾಹದಿಂದ ಉಂಟಾದ ವಿನಾಶದ ಪ್ರಮಾಣದ ಚಿತ್ರಣಗಳನ್ನು ಇಸ್ರೋ (ISRO) ಬಹಿರಂಗಪಡಿಸಿದೆ.
ಸದ್ಯ ಇಸ್ರೋ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳು ಪ್ರಕೃತಿ ವಿಕೋಪದಿಂದ ಉಂಟಾದ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತಿ ನೀಡಿವೆ.
ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (NRSC) ಧಾರಾಲಿಯ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಮೇಘಸ್ಫೋಟಕ್ಕೂ ಮುನ್ನ ಗ್ರಾಮದಂತಿದ್ದ ಧಾರಾಲಿಯು ನಂತರ ಮನೆಗಳೆಲ್ಲ ಧರಾಶಾಹಿಯಾಗಿ ಸ್ಮಶಾನದಂತಾಗಿರುವ ಭೀಕರತೆ ಫೋಟೋದಲ್ಲಿದೆ.
ಪ್ರವಾಹದ ಎರಡು ದಿನಗಳ ನಂತರ ಇಸ್ರೋದ ಕಾರ್ಟೊಸ್ಯಾಟ್-2S ಉಪಗ್ರಹವು, ಪ್ರವಾಹ ಪೀಡಿತ ವಲಯದ ಚಿತ್ರಗಳನ್ನು ಸೆರೆಹಿಡಿದಿದೆ.
ಧಾರಾಕಾರ ಮಳೆಯಿಂದ ಉಂಟಾದ ಭೀಕರ ಪ್ರವಾಹವು ಆಗಸ್ಟ್ 5 ರಂದು ಉತ್ತರಕಾಶಿ ಜಿಲ್ಲೆಯ ಧಾರಾಲಿ ಮತ್ತು ಹರ್ಸಿಲ್ ಗ್ರಾಮಗಳನ್ನು ಬಹುಪಾಲು ನಾಶ ಮಾಡಿದೆ. ಹಠಾತ್ ಮೇಘ ಸ್ಫೋಟದ ರಭಸಕ್ಕೆ ಮನೆಗಳು ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಮತ್ತು ಜೀವ ಹಾನಿಗೆ ಕಾರಣವಾಗಿದೆ. ಧರಾಲಿ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟಡಗಳು, ರಸ್ತೆಗಳು ಮತ್ತು ತೋಟಗಳು ನೆಲಸಮ ಆಗಿರುವುದನ್ನು ಈ ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ .ಭಾರತದ ಕಾರ್ಟೊಸಾಟ್-2S ಮೂಲಕ ಹೈ ರೆಸಲ್ಯೂಶನ್ ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು NRSC/ISRO ಹಾನಿಯ ತ್ವರಿತ ಮೌಲ್ಯಮಾಪನವನ್ನು ನಡೆಸಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಉಪಗ್ರಹ ಚಿತ್ರಗಳಂದ ಅವಶೇಗಳಡಿ ಸಿಲುಕಿದ ಜನರನ್ನು ಹುಡುಕಲು ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಹಾಗೂ ಸಹಾಯಕವಾಗಲಿದೆ. ವಿಪತ್ತಿಗೆ ನಿಖರ ಕಾರಣ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೂ ಕಾರಣವನ್ನು ಕಂಡುಹಿಡಿಯಲು ವೈಜ್ಞಾನಿಕ ವಿಶ್ಲೇಷಣೆ ನಡೆಯುತ್ತಿದೆ. ಈ ಘಟನೆಯು ಹಿಮಾಲಯನ್ ವಸಾಹತುಗಳಿಗೆ ವಿಪತ್ತುಳು ಹೆಚ್ಚುತ್ತಿರುವ ಎತ್ತಿ ತೋರಿಸುತ್ತದೆ ಎಂದು ಇಸ್ರೋ ಹೇಳಿದೆ.