ಭಾರತವು ತನ್ನ ಸಾಂಸ್ಕೃತಿಕ ಪರಂಪರೆ, ಪ್ರಾಚೀನ ವಾಸ್ತುಶಿಲ್ಪ ಮತ್ತು ಧಾರ್ಮಿಕ ಇತಿಹಾಸಕ್ಕಾಗಿ ಜಗತ್ತಿನಾದ್ಯಂತ ಪ್ರಸಿದ್ಧವಾಗಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊತ್ತಿರುವ ಅನೇಕ ದೇವಾಲಯಗಳಲ್ಲಿ ಕೆಲವು ಇಂದಿಗೂ ಶ್ರದ್ಧಾ ಕೇಂದ್ರಗಳಾಗಿ ಉಳಿದಿವೆ. ಇಲ್ಲಿವೆ ಭಾರತದ ಐದು ಅತಿ ಹಳೆಯ ದೇವಾಲಯಗಳು.
ಮುಂಡೇಶ್ವರಿ ದೇವಾಲಯ – ಬಿಹಾರ
ಬಿಹಾರ ರಾಜ್ಯದ ಕಮಲಾಪುರದಲ್ಲಿರುವ ಮುಂಡೇಶ್ವರಿ ದೇವಾಲಯ ಕ್ರಿ.ಶ. 108ರಲ್ಲಿ ನಿರ್ಮಾಣವಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಶಕ್ತಿಯ ರೂಪವಾದ ದುರ್ಗಾ ದೇವಿಗೆ ಸಮರ್ಪಿತವಾದ ಈ ದೇವಸ್ಥಾನವು ಅಷ್ಟಭುಜಾಕಾರದ ವಿನ್ಯಾಸ ಹೊಂದಿದೆ. ಇದು ಭಾರತದ ನಿರಂತರ ಪೂಜೆಯಾಗುವ ಅತ್ಯಂತ ಹಳೆಯ ದೇವಾಲಯವೆಂದು ಪರಿಗಣಿಸಲಾಗಿದೆ.
ಶೋರ್ ದೇವಸ್ಥಾನ – ತಮಿಳುನಾಡು
ಮಹಾಬಲಿಪುರಂನ ಕರಾವಳಿ ತೀರದಲ್ಲಿ 8ನೇ ಶತಮಾನದಲ್ಲಿ ಪಲ್ಲವ ವಂಶದವರು ನಿರ್ಮಿಸಿದ ಶೋರ್ ದೇವಸ್ಥಾನವು ಶಿಲ್ಪಕಲೆಯ ಅದ್ಭುತ ಮಾದರಿಯಾಗಿದೆ. ಯುನೆಸ್ಕೋ ವಿಶ್ವ ಹೇರಿಟೇಜ್ ಪಟ್ಟಿಯಲ್ಲಿರುವ ಈ ದೇವಾಲಯವು ಶೈವ ಮತ್ತು ವೈಷ್ಣವ ಆರಾಧನೆಗೆ ಪ್ರಸಿದ್ಧ.
ಲಡಖ್‌ನ ಅಲ್ಚಿ ಮಠ
ಹಿಮಾಲಯ ಪರ್ವತಗಳ ಮಧ್ಯದಲ್ಲಿರುವ ಅಲ್ಚಿ ಬೌದ್ಧ ಮಠ 10ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಕಾಶ್ಮೀರಿ ಶೈಲಿಯ ಚಿತ್ರಕಲೆ ಮತ್ತು ಶಿಲ್ಪಗಳಿಂದ ಪ್ರಸಿದ್ಧಿ ಪಡೆದಿದೆ. ಇದು ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಪ್ರಮುಖ ಬೌದ್ಧ ತಾಣ.
ಕೋನಾರ್ಕ್ ಸೂರ್ಯ ದೇವಸ್ಥಾನ – ಒಡಿಶಾ
13ನೇ ಶತಮಾನದಲ್ಲಿ ಗಂಗ ವಂಶದ ರಾಜ ನರಸಿಂಹದೇವನಿಂದ ನಿರ್ಮಿಸಲಾದ ಈ ದೇವಸ್ಥಾನವು ರಥಾಕಾರದ ವಿನ್ಯಾಸ ಹೊಂದಿದೆ. ಸೂರ್ಯ ದೇವನ ಆರಾಧನೆಗೆ ಸಮರ್ಪಿತವಾದ ಈ ತಾಣವೂ ಯುನೆಸ್ಕೋ ಪಟ್ಟಿಯಲ್ಲಿದೆ.
ಕೈಲಾಸನಾಥ ದೇವಸ್ಥಾನ – ಎಲ್ಲೋರಾ
ಮಹಾರಾಷ್ಟ್ರದ ಎಲೋರಾ ಗುಹೆಗಳಲ್ಲಿ 8ನೇ ಶತಮಾನದಲ್ಲಿ ರಾಷ್ತ್ರಕೂಟ ರಾಜ ಕೃಷ್ಣ-I ನಿರ್ಮಿಸಿದ ಕೈಲಾಸನಾಥ ದೇವಸ್ಥಾನ ಸಂಪೂರ್ಣ ಪರ್ವತವನ್ನು ಕತ್ತರಿಸಿ ಮಾಡಿದ ಅಚ್ಚರಿಯ ದೇವಸ್ಥಾನ. ಇದು ಶಿವನಿಗೆ ಸಮರ್ಪಿತವಾಗಿದೆ.