ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಸಿಕ್ಕಿದ್ದು, ಇಂದು ಮತ್ತೊಂದು ಹೊಸ ಜಾಗದಲ್ಲಿ ಎಸ್ ಐಟಿ ತಂಡ ಶೋಧಕಾರ್ಯ ಆರಂಭಿಸಿದೆ. ಬಾಹುಬಲಿ ಮೂರ್ತಿ ಇರುವ ರತ್ನಗಿರಿ ಬೆತ್ತದ ತಪ್ಪಲಿನಲ್ಲಿ ದೂರುದಾರ ತೋರಿಸಿರುವ 16ನೇ ಪಾಯಿಂಟ್ ನಲ್ಲಿ ಎಸ್ ಐಟಿ ತಂಡ ಅಸ್ಥಿಪಂಜರಕ್ಕಾಗಿ ಶೋಧ ಕಾರ್ಯ ನಡೆಸಿದೆ.
ಈ ಪ್ರಕರಣದಲ್ಲಿ ಅನಾಮಿಕ ಸಾಕ್ಷ್ಯದ ಆಧಾರದ ಮೇಲೆ ವಿಶೇಷ ತನಿಖಾ ತಂಡ (SIT) ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಈ ಮೊದಲು ಮೊದಲ ಹಂತದಲ್ಲಿ 13 ಸ್ಥಳಗಳನ್ನು ಗುರುತಿಸಿದ್ದ. ಆದರೆ ಇದೀಗ ಮತ್ತೆ ಮತ್ತೆ ಹೊಸ ಜಾಗವನ್ನು ಗುರುತಿಸಿದ್ದಾನೆ.ಇದೀಗ ಅನಾಮಿಕ ಗುರುತಿಸಿದ 16 ನೇ ಪಾಯಿಂಟ್ ಸ್ಥಳದಲ್ಲಿ ಉತ್ಖನನ ಕಾರ್ಯವನ್ನು ತೀವ್ರಗೊಳಿಸಿದೆ.
ಇಂದು ಬಾಹುಬಲಿ ಬೆಟ್ಟದ ಸುತ್ತಲಿನ 16ನೇ ಸ್ಪಾಟ್ನಲ್ಲಿ ಉತ್ಖನನ ಕಾರ್ಯವು ತೀವ್ರಗೊಂಡಿದೆ. ಸ್ಥಳದಲ್ಲಿ ಬೆಳೆದಿರುವ ಗಿಡಮರಗಳನ್ನು ಕಡಿಯಲು ಸ್ವಚ್ಛಗೊಳಿಸುವ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮಣ್ಣು ತೆಗೆಯುವ ಕಾರ್ಯವನ್ನು ಕಾರ್ಮಿಕರ ಮೂಲಕ ಆರಂಭಿಸಲಾಗಿದೆ.