ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸುವ ನೂತನ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಮೇಖ್ರಿ ಸರ್ಕಲ್‌ನಿಂದ ಚಾಲುಕ್ಯ ಸರ್ಕಲ್ ಮೂಲಕ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದ ಮೋದಿ, ಹೊಸ ರೈಲನ್ನು ಅಧಿಕೃತವಾಗಿ ಪ್ರಾರಂಭಿಸಿದರು.
ಮೇಖ್ರಿ ಸರ್ಕಲ್ ಹೆಲಿಪ್ಯಾಡ್‌ನಿಂದ ರಸ್ತೆ ಮಾರ್ಗವಾಗಿ ರೈಲು ನಿಲ್ದಾಣಕ್ಕೆ ಬಂದ ಪ್ರಧಾನಿಯನ್ನು ನೋಡುವುದಕ್ಕಾಗಿ ಜನಸಮೂಹ ಕಿಕ್ಕಿರಿದು ತುಂಬಿತ್ತು. ರೈಲು ಉದ್ಘಾಟನೆಯ ನಂತರ ಮೋದಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಿದರು.
ಈ ಹೊಸ ವಂದೇ ಭಾರತ್ ರೈಲು ವಾರದಲ್ಲಿ ಆರು ದಿನ ಸಂಚರಿಸುವುದು. ಬೆಳಗಾವಿಯಿಂದ ಬೆಳಿಗ್ಗೆ 5:20ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ಬೆಂಗಳೂರು ತಲುಪುವುದು, ನಂತರ ಮಧ್ಯಾಹ್ನ 2:20ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10:40ಕ್ಕೆ ಬೆಳಗಾವಿ ತಲುಪುವುದು. ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ 8 ಜಿಲ್ಲೆಗಳ ಮೂಲಕ ರೈಲು ಸಂಚರಿಸಲಿದೆ.
ಕರ್ನಾಟಕದಲ್ಲಿ ಸಂಚರಿಸುವ ವಂದೇ ಭಾರತ್ ರೈಲುಗಳ ಪಟ್ಟಿ
ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು
ಮೈಸೂರು – ಎಂಜಿಆರ್ ಚೆನ್ನೈ ಸೆಂಟ್ರಲ್
ಕಲಬುರಗಿ – ಎಸ್‌ಎಂವಿಟಿ ಬೆಂಗಳೂರು
ಕೆಎಸ್‌ಆರ್ ಬೆಂಗಳೂರು – ಧಾರವಾಡ
ಮಂಗಳೂರು ಸೆಂಟ್ರಲ್ – ತಿರುವನಂತಪುರ
ಬೆಂಗಳೂರು ಕಂಟೋನ್ಮೆಂಟ್ – ಕೊಯಮತ್ತೂರು
ಮಂಗಳೂರು ಸೆಂಟ್ರಲ್ – ಮಡಗಾಂವ್
ಬೆಂಗಳೂರು ಯಶವಂತಪುರ – ಕಾಚೆಗುಡ ಹೈದರಾಬಾದ್
ಬೆಂಗಳೂರು ಕಂಟೋನ್ಮೆಂಟ್ – ಮಧುರೈ
ಹುಬ್ಬಳ್ಳಿ – ಪುಣೆ