yellow line metro train ದರ ಹೇಗಿದೆ? ಎಲ್ಲಿಂದ ಎಲ್ಲಿಗೆ ಎಷ್ಟು ರೂಪಾಯಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಆರ್.ವಿ ರಸ್ತೆ–ಬೊಮ್ಮಸಂದ್ರ ನಡುವಿನ “ನಮ್ಮ ಮೆಟ್ರೋ” ಹಳದಿ ಮಾರ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಬೆಳಗ್ಗೆ ಉದ್ಘಾಟನೆಯ ನಂತರ ಈ ಮಾರ್ಗದಲ್ಲಿ ಸಂಚಾರ ಪ್ರಾರಂಭವಾಗಲಿದೆ.

ಒಟ್ಟು 16 ನಿಲ್ದಾಣಗಳನ್ನು ಹೊಂದಿರುವ ಹಳದಿ ಮಾರ್ಗದ ಉದ್ದ 19.15 ಕಿಲೋಮೀಟರ್ ಆಗಿದೆ. ಪ್ರಾರಂಭದಲ್ಲಿ ಮೂರು ಮೆಟ್ರೋ ರೈಲುಗಳು ಈ ಮಾರ್ಗದಲ್ಲಿ ಓಡಲಿದ್ದು, ತಿಂಗಳ ಕೊನೆಯಲ್ಲಿ ನಾಲ್ಕನೇ ರೈಲನ್ನೂ ಸೇರಿಸಲಾಗುವುದು. 2014ರಲ್ಲಿ ಆರಂಭವಾದ ಈ ಕಾಮಗಾರಿ 2021ರೊಳಗೆ ಪೂರ್ಣಗೊಳ್ಳಬೇಕಿತ್ತು, ಆದರೆ ವಿವಿಧ ಕಾರಣಗಳಿಂದ ವಿಳಂಬಗೊಂಡು ಈಗ ಉದ್ಘಾಟನೆಗೊಳಗಾಗಿದೆ. ಈ ಮಾರ್ಗದ ನಿರ್ಮಾಣಕ್ಕೆ 7,616 ಕೋಟಿ ರೂ. ವೆಚ್ಚವಾಗಿದೆ.

ಹಳದಿ ಮಾರ್ಗದ ಪ್ರಯಾಣ ದರಗಳು

ಆರ್.ವಿ ರಸ್ತೆ – ರಾಗಿಗುಡ್ಡ: 10

ಆರ್.ವಿ ರಸ್ತೆ – ಜಯದೇವ: 10

ಆರ್.ವಿ ರಸ್ತೆ – BTM ಲೇಔಟ್: 20

ಆರ್.ವಿ ರಸ್ತೆ – ಬೊಮ್ಮನಹಳ್ಳಿ: 30

ಆರ್.ವಿ ರಸ್ತೆ – ಕೂಡ್ಲೂಗೇಟ್: 40

ಆರ್.ವಿ ರಸ್ತೆ – ಸಿಂಗಸಂದ್ರ: 50

ಆರ್.ವಿ ರಸ್ತೆ – ಎಲೆಕ್ಟ್ರಾನಿಕ್ ಸಿಟಿ: 60

ಆರ್.ವಿ ರಸ್ತೆ – ಬೊಮ್ಮಸಂದ್ರ: 60

ಸಿಲ್ಕ್ ಬೋರ್ಡ್ – ಬೊಮ್ಮಸಂದ್ರ: 60

ಹಳದಿ ಮಾರ್ಗದ ಆರಂಭದಿಂದ ಉದ್ಯಾನನಗರದ ದಕ್ಷಿಣ ಭಾಗದ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭವಾದ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಸುಧಾರಿಸುವ ಮೂಲಕ ಸಂಚಾರ ಕಿಕ್ಕಿರಿತನ ಕಡಿಮೆಯಾಗುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!