ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಆಯ್ತು! ಈಗ ಕಿತ್ತಳೆ ಮಾರ್ಗಕ್ಕೂ ಶಂಕುಸ್ಥಾಪನೆ ಆಗೋಯ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಸಾರಿಗೆ ಕ್ಷೇತ್ರದಲ್ಲಿ ಇತಿಹಾಸಿಕ ದಿನ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮೆಟ್ರೋ ಹಳದಿ ಮಾರ್ಗವನ್ನು ಅಧಿಕೃತವಾಗಿ ಚಾಲನೆಗೊಳಿಸಿದರು. ಒಟ್ಟು 19.15 ಕಿ.ಮೀ ಉದ್ದದ ಈ ಮಾರ್ಗವು 16 ನಿಲ್ದಾಣಗಳನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ದಕ್ಷಿಣ ಬೆಂಗಳೂರು ಹಾಗೂ ನಗರದ ಕೇಂದ್ರಭಾಗವನ್ನು ಸುಗಮವಾಗಿ ಸಂಪರ್ಕಿಸುತ್ತದೆ. 5,056.99 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಮಾರ್ಗದಿಂದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.

ಇದೇ ಸಂದರ್ಭದಲ್ಲಿ ಮೋದಿ ಅವರು ಮೆಟ್ರೋ ಮೂರನೇ ಹಂತದ ಕಿತ್ತಳೆ ಮಾರ್ಗಕ್ಕೂ ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟು 44.65 ಕಿ.ಮೀ ಉದ್ದದ ಈ ಎಲಿವೇಟೆಡ್ ಮಾರ್ಗವು 31 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ:

ಕಾರಿಡಾರ್-1: ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರ (32.15 ಕಿ.ಮೀ, 22 ನಿಲ್ದಾಣಗಳು)

ಕಾರಿಡಾರ್-2: ಹೊಸಹಳ್ಳಿಯಿಂದ ಕಡಬಗೆರೆ (12.5 ಕಿ.ಮೀ, 9 ನಿಲ್ದಾಣಗಳು, ಡಬ್ಬಲ್ ಡೆಕ್ಕರ್ ಮಾದರಿ)

ಈ ಹೊಸ ಮಾರ್ಗಗಳು ನಗರದ ದಕ್ಷಿಣ, ಪಶ್ಚಿಮ ಹಾಗೂ ವಿಮಾನ ನಿಲ್ದಾಣ ಮಾರ್ಗಗಳ ನಡುವಿನ ಸಂಪರ್ಕವನ್ನು ಬಲಪಡಿಸಲಿವೆ.

ಹಳದಿ ಮಾರ್ಗದ ಉದ್ಘಾಟನೆ ಹಾಗೂ ಕಿತ್ತಳೆ ಮಾರ್ಗದ ಶಂಕುಸ್ಥಾಪನೆ, ಬೆಂಗಳೂರಿನ ಸಾರಿಗೆ ಮೂಲಸೌಕರ್ಯದಲ್ಲಿ ಮಹತ್ತರ ಹೆಜ್ಜೆ. ಇದರಿಂದ ದಟ್ಟಣೆ ಕಡಿಮೆಯಾಗುವುದು, ಪರಿಸರ ಸ್ನೇಹಿ ಸಂಚಾರಕ್ಕೆ ಉತ್ತೇಜನ ದೊರಕುವುದು ಹಾಗೂ ವಾಣಿಜ್ಯ-ವಸತಿ ಪ್ರದೇಶಗಳ ಅಭಿವೃದ್ಧಿಗೆ ವೇಗ ಸಿಗುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!