ವಿಮಾನದಲ್ಲಿ ಕೊಳಕು ಸೀಟು ಕೊಟ್ಟಿದ್ದಕ್ಕೆ ಮಹಿಳೆ ಗರಂ: ಇಂಡಿಗೋಗೆ ದೊಡ್ಡ ಮೊತ್ತ ದಂಡ ವಿಧಿಸಿದ ಗ್ರಾಹಕ ವೇದಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಗೋ ಏರ್‌ಲೈನ್ಸ್ ನಲ್ಲಿ ಪ್ರಯಾಣದ ಸಮಯ ಮಹಿಳೆಗೆ ಕೊಳಕಾದ ಸೀಟನ್ನು ಕೊಡಲಾಗಿದೆ.ಇದರಿಂದ ಅಸಮಾಧಾನಗೊಂಡ ಮಹಿಳೆ ದೂರು ನೀಡಿದರೂ, ಆದ್ರೆ ಯಾವುದೇ ಕ್ರಮ ಕೈಗೊಳ್ಳದ ವಿಮಾನ ಸಿಬ್ಬಂದಿಗೆ ಇದಕ್ಕೆ ನಿಮ್ಮಿಂದ ಪರಿಹಾರ ಪಡೆಯದೇ ಇರುವುದಿಲ್ಲ ಎಂದು ಹೇಳಿದ್ದರು.

ಬಳಿಕ ಮಹಿಳೆಯೊಬ್ಬರಿಗೆ ಕಲೆಯಾದ ಸೀಟನ್ನು ನೀಡಿದ್ದ ಇಂಡಿಗೋ ಏರ್‌ಲೈನ್ಸ್ ಅನ್ನು ಸೇವಾ ಕೊರತೆಯ ದೋಷಿ ಎಂದು ದೆಹಲಿ ಗ್ರಾಹಕ ವೇದಿಕೆ ತೀರ್ಪು ನೀಡಿದ್ದು, ಆಕೆ ಅನುಭವಿಸಿದ ಅಸ್ವಸ್ಥತೆ, ನೋವು ಮತ್ತು ಮಾನಸಿಕ ಯಾತನೆಗೆ 1.5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಈ ವರ್ಷದ ಜನವರಿ 2 ರಂದು ಬಾಕುದಿಂದದೆಹಲಿಗೆ ಪ್ರಯಾಣಿಸುತ್ತಿದ್ದಾಗ ‘ಅನೈರ್ಮಲ್ಯ, ಕೊಳಕು ಮತ್ತು ಕಲೆಯಾದ’ ಸೀಟನ್ನು ನೀಡಲಾಗಿದೆ ಎಂದು ಆರೋಪಿಸಿ ಪಿಂಕಿ ಎಂಬುವವರು ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ಅಧ್ಯಕ್ಷೆ ಪೂನಂ ಚೌಧರಿ ಮತ್ತು ಸದಸ್ಯರಾದ ಬರಿಕ್ ಅಹ್ಮದ್ ಮತ್ತು ಶೇಖರ್ ಚಂದ್ರ ಅವರನ್ನೊಳಗೊಂಡ ನವದೆಹಲಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ಈ ತೀರ್ಪು ನೀಡಿದೆ.

ಈ ವಿಷಯದ ಕುರಿತು ನಾನು ನೀಡಿದ ದೂರನ್ನು ಏರ್‌ಲೈನ್ಸ್ ‘ತಿರಸ್ಕಾರ ಮತ್ತು ಸೂಕ್ಷ್ಮವಲ್ಲದ ರೀತಿಯಲ್ಲಿ’ ಪರಿಗಣಿಸಿದೆ ಎಂದು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಪ್ರತಿಯಾಗಿ, ಅವರಿಗೆ ಬೇರೆ ಸೀಟನ್ನು ನಿಗದಿಪಡಿಸಲಾಗಿತ್ತು. ಆದರೆ, ಅವರೇ ಸ್ವಇಚ್ಛೆಯಿಂದ ದೆಹಲಿಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಪುರಾವೆಗಳನ್ನು ಗಮನಿಸಿದ ವೇದಿಕೆ, ‘ಸೇವೆಯಲ್ಲಿನ ಕೊರತೆಯಿಂದಾಗಿ ಎದುರು ಪಕ್ಷ (ಇಂಡಿಗೋ) ತಪ್ಪಿತಸ್ಥರೆಂದು ನಾವು ಭಾವಿಸುತ್ತೇವೆ. ಆಕೆ ಅನುಭವಿಸಿದ ಅಸ್ವಸ್ಥತೆ ಮತ್ತು ನೋವು, ಮಾನಸಿಕ ಯಾತನೆಗೆ ಸಂಬಂಧಿಸಿದಂತೆ, ಆಕೆಗೆ ಪರಿಹಾರ ನೀಡಬೇಕು ಎಂದು ನಾವು ಭಾವಿಸುತ್ತೇವೆ. ಅದಕ್ಕೆ ಅನುಗುಣವಾಗಿ, ವಿಮಾನಯಾನ ಸಂಸ್ಥೆಯು 1.5 ಲಕ್ಷ ರೂ.ಗಳನ್ನು ಪಾವತಿಸಲು ನಾವು ನಿರ್ದೇಶಿಸುತ್ತೇವೆ’ ಎಂದು ಜುಲೈ 9 ರಂದು ಬಿಡುಗಡೆಯಾದ ಆದೇಶದಲ್ಲಿ ವೇದಿಕೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!