ಅಡುಗೆ ಮನೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹುತೇಕ ಮಹಿಳೆಯರಿಗೆ ಸವಾಲಿನ ಕೆಲಸ. ಎಷ್ಟು ಬಾರಿ ಸ್ವಚ್ಛಗೊಳಿಸಿದರೂ, ಅಡುಗೆ ಮಾಡುವ ವೇಳೆ ಎಣ್ಣೆ, ಸಾಂಬಾರು, ಮಸಾಲೆ ಪದಾರ್ಥಗಳು ಗೋಡೆಯ ಮೇಲೆ ಚಿಮ್ಮುವುದು ಸಹಜ. ಇದನ್ನು ತಕ್ಷಣವೇ ಒರಸಿ ತೆಗೆದರೆ ಸಮಸ್ಯೆ ಕಡಿಮೆ, ಇಲ್ಲವಾದರೆ ಜಿಡ್ಡಿನ ಕಲೆಗಳು ಅಂಟಿಕೊಂಡು ಹೋಗುತ್ತವೆ. ಈ ಎಣ್ಣೆ ಕಲೆಗಳನ್ನು ತೆಗೆಯೋಕೆ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.
ಉಪ್ಪು ನೀರು – ಅಡುಗೆ ಮನೆಯ ಗೋಡೆಯ ಮೇಲಿನ ಎಣ್ಣೆಯ ಕಲೆಗಳಿಗೆ ಉಪ್ಪು ನೀರನ್ನು ಹಚ್ಚಿ ತೊಳೆದರೆ ಕಲೆಗಳು ಮಾಯವಾಗುತ್ತವೆ.
ಅಡುಗೆ ಸೋಡಾ – ಸೋಡಾ ಪೌಡರ್ ಬಳಸಿ ಒರೆಸಿದರೆ ಜಿಡ್ಡಿನ ಕಲೆಗಳು ಸಹ ಸುಲಭವಾಗಿ ಹೋಗುತ್ತವೆ.
ಟೂತ್ ಪೇಸ್ಟ್ – ಬಿಳಿ ಟೂತ್ ಪೇಸ್ಟ್ ಅನ್ನು ಕಲೆಯ ಮೇಲೆ ಹಚ್ಚಿ ಐದು ನಿಮಿಷ ಬಿಟ್ಟು, ಬಳಿಕ ತೊಳೆದರೆ ಕಲೆ ಮಾಯವಾಗುತ್ತದೆ.
ಹೇರ್ ಡ್ರೈಯರ್ ವಿಧಾನ – ಎಣ್ಣೆಯ ಕಲೆಯ ಮೇಲೆ ಕಾಗದ ಇಟ್ಟು, ಹೇರ್ ಡ್ರೈಯರ್ನ ಬಿಸಿ ಗಾಳಿ ಹಾಯಿಸಿದರೆ ಎಣ್ಣೆ ಕರಗಿ ಕಲೆ ಹೋಗುತ್ತದೆ.
ನಿಂಬೆ ಮತ್ತು ವಿನೆಗರ್ ಮಿಶ್ರಣ – ಎರಡನ್ನೂ ಬೆರೆಸಿ, ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ, ಆ ನೀರಿನಿಂದ ಗೋಡೆಯನ್ನು ತೊಳೆದರೆ ಹೊಳೆಯುವಂತೆ ಸ್ವಚ್ಛವಾಗುತ್ತದೆ.
ಲಿಕ್ವಿಡ್ ಡಿಶ್ ವಾಶ್ – ಟೈಲ್ಸ್ ಅಥವಾ ಗೋಡೆಯ ಮೇಲೆ ಡಿಶ್ ವಾಶ್ ಸ್ಪ್ರೇ ಮಾಡಿ ಒಂದು ಗಂಟೆ ಬಿಟ್ಟು, ಬಳಿಕ ಬಟ್ಟೆಯಿಂದ ಒರೆಸಿದರೆ ಎಲ್ಲಾ ಕಲೆಗಳು ಮಾಯಾ.
ಅಡುಗೆ ಮನೆಯ ಗೋಡೆಯ ಎಣ್ಣೆ ಕಲೆಗಳನ್ನು ಹೋಗಲಾಡಿಸಲು ದುಬಾರಿ ಕ್ಲೀನರ್ಗಳ ಅವಶ್ಯಕತೆ ಇಲ್ಲ. ಮನೆಯಲ್ಲಿ ಲಭ್ಯವಿರುವ ಸಾಮಾನ್ಯ ವಸ್ತುಗಳಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು. ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸಿದರೆ ಅಡುಗೆ ಮನೆ ಯಾವಾಗಲೂ ಶುದ್ಧ, ಸುಗಂಧಮಯ ಹಾಗೂ ಆಕರ್ಷಕವಾಗಿ ಇರುತ್ತದೆ.