CINE | ವಾರ್ 2 ಬುಕ್ಕಿಂಗ್ ಶುರು: ಹೃತಿಕ್–ಎನ್‌ಟಿಆರ್ ಜೋಡಿಮೇಲಿದೆ ಅಭಿಮಾನಿಗಳ ನಿರೀಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹು ನಿರೀಕ್ಷಿತ ವಾರ್ 2 ಚಿತ್ರದ ಮುಂಗಡ ಬುಕ್ಕಿಂಗ್ ಭಾರತದಲ್ಲಿ ಅಧಿಕೃತವಾಗಿ ಪ್ರಾರಂಭಗೊಂಡಿದ್ದು, ಹೃತಿಕ್ ರೋಷನ್ ಭಾನುವಾರ ಸಾಮಾಜಿಕ ಮಾಧ್ಯಮದ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಬಿಡುಗಡೆಯ ದಿನಾಂಕಕ್ಕೂ ಮುನ್ನವೇ, ಚಿತ್ರದ ಮುಂಗಡ ಮಾರಾಟದ ಅಂಕಿಅಂಶಗಳು ಚಿತ್ರದ ಬಗ್ಗೆ ಭರವಸೆ ಮೂಡಿಸಿವೆ.

ಚಿತ್ರವು ಆಗಸ್ಟ್ 14 ರಂದು ಬಿಡುಗಡೆಯಾಗಲಿದ್ದು, ವರದಿಗಳ ಪ್ರಕಾರ ಭಾನುವಾರ ರಾತ್ರಿ 9 ಗಂಟೆಯ ವೇಳೆಗೆ ಮುಂಗಡ ಬುಕಿಂಗ್ ಮೊತ್ತ 2.24 ಕೋಟಿ ದಾಟಿದೆ. ಹಿಂದಿ ಆವೃತ್ತಿಗೆ ಸುಮಾರು 9000 ಪ್ರದರ್ಶನಗಳು (2D, IMAX, DOLBY, 4DX ಇತ್ಯಾದಿ ಸ್ವರೂಪಗಳು) ಲಭ್ಯವಿದ್ದು, ತಮಿಳಿನಲ್ಲಿ 100 ಮತ್ತು ತೆಲುಗಿನಲ್ಲಿ 115 ಪ್ರದರ್ಶನಗಳಿವೆ. ತೆಲುಗು ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಿರುವುದನ್ನು ಗಮನಿಸಿದರೆ, ತೆಲುಗು ಪ್ರದರ್ಶನಗಳ ಸಂಖ್ಯೆ ಕಡಿಮೆ ಎಂದು ಉದ್ಯಮ ವಲಯ ಅಭಿಪ್ರಾಯ ಪಟ್ಟಿದೆ.

‘ಬ್ಲಾಕ್ ಸೀಟುಗಳು’ ಅಂದಾಜು 7.6 ಕೋಟಿ ಮೌಲ್ಯದವುಗಳಾಗಿದ್ದು, ಇವು ಸಾಮಾನ್ಯವಾಗಿ ಚಿತ್ರಮಂದಿರಗಳ ವಿಶೇಷ ಯೋಜನೆಗಳು ಅಥವಾ ಪ್ರಚಾರ ಕಾರ್ಯಗಳ ಭಾಗವಾಗಿ ಕಾಯ್ದಿರಿಸಲ್ಪಟ್ಟಿರುತ್ತವೆ. ಇದರಿಂದ ಚಿತ್ರ ಬಿಡುಗಡೆಯ ದಿನ ಹೆಚ್ಚು ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಾರ್ 2 ಮುಂಗಡ ಬುಕಿಂಗ್ ಆರಂಭಗೊಂಡಿದೆ. ಅಮೇರಿಕಾದಲ್ಲಿ ಹಿಂದಿ ಆವೃತ್ತಿಯು 900 ಪರದೆಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರೀಮಿಯರ್ ಪ್ರದರ್ಶನಗಳಿಗೆ ಟಿಕೆಟ್ ಮಾರಾಟ ಇನ್ನೂ ಹೆಚ್ಚುವ ನಿರೀಕ್ಷೆಯಿದೆ.

ಚಿತ್ರದಲ್ಲಿ ಹೃತಿಕ್ ರೋಷನ್ ಅವರು ರಾ & ಎಡಬ್ಲ್ಯೂ ಏಜೆಂಟ್ ಕಬೀರ್ ಪಾತ್ರಕ್ಕೆ ಮರಳಲಿದ್ದು, ಜೂನಿಯರ್ ಎನ್‌ಟಿಆರ್ ಹೊಸ ಖಳನಾಯಕನಾಗಿ ಅಭಿನಯಿಸಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ.

ಅಯಾನ್ ಮುಖರ್ಜಿ ನಿರ್ದೇಶನದ ವಾರ್ 2, ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಇತ್ತೀಚಿನ ಸೇರ್ಪಡೆ. ಈ ಸರಣಿಯಲ್ಲಿ ಈಗಾಗಲೇ ಟೈಗರ್ ಚಿತ್ರಗಳು, ವಾರ್ ಮತ್ತು ಪಠಾಣ್ ಯಶಸ್ಸು ಕಂಡಿವೆ. ಮುಂದಿನ ದಿನಗಳಲ್ಲಿ ಆಲಿಯಾ ಭಟ್ ಹಾಗೂ ಶಾರ್ವರಿ ನಟನೆಯ ಆಲ್ಫಾ ಕೂಡ ಬಿಡುಗಡೆಯ ಹಂತಕ್ಕೆ ಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!