ಹೊಸದಿಗಂತ ವಿಜಯಪುರ:
ಗುಮ್ಮಟ ನಗರ ಮಹಾನಗರ ಪಾಲಿಕೆ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಸೇರಿದೆ. ಬಿಜೆಪಿ ಸದಸ್ಯರಾದ ಎಂ.ಎಸ್. ಕರಡಿ ಮೇಯರ್ ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಸುಮಿತ್ರಾ ಜಾಧವ ಉಪ ಮೇಯರ್ ಆಗಿ ಆಯ್ಕೆಗೊಂಡಿದ್ದಾರೆ.
ಜನವರಿ, ಫೆಬ್ರುವರಿಯಲ್ಲಿ ಜರುಗಿದ ವಿಜಯಪುರ ಮಹಾನಗರ ಪಾಲಿಕೆಯ 22ನೇ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯ ಚುನಾವಣೆ ಫಲಿತಾಂಶ ಸಭೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಮೇಯರ್ ಆಗಿ ಎಂ.ಎಸ್. ಕರಡಿ ಹಾಗೂ ಉಪ ಮೇಯರ್ ಆಗಿ ಸುಮಿತ್ರಾ ಜಾಧವ ಅವರು ಆಯ್ಕೆಗೊಂಡಿದ್ದಾರೆಂದು ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆನವರ ಘೋಷಿಸಿದರು.
ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾರ್ ನಲ್ಲಿಯೇ ನೂತನ ಮೇಯರ್ ಉಪಮೇಯರ್ ಆಗಮಿಸಿದ್ದು, ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿತು.
ವಿಜಯಪುರ ನಗರ ಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ಕಾಂಗ್ರೆಸ್ ಆಡಳಿತ ನಡೆಸುತ್ತ ಬಂದಿದ್ದು, ಇದೇ ಮೊದಲ ಬಾರಿಗೆ ಪಾಲಿಕೆ ಬಿಜೆಪಿ ವಶವಾಗಿದೆ.