ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 15ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ಓಡಾಡುವ ವಾಹನ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಹಾಗೂ ಟೋಲ್‌ಗೇಟ್‌ಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಹೆದ್ದಾರಿ ಸಚಿವಾಲಯ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಗೆ ಚಾಲನೆ ನೀಡುತ್ತಿದ್ದಾರೆ.
ವಾಣಿಜ್ಯೇತರ ವಾಹನಗಳಾದ ಖಾಸಗಿ ಕಾರು, ಜೀಪು ಮತ್ತು ವ್ಯಾನ್‌ಗಳ ಮಾಲೀಕರಿಗೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ನೀಡಲಾಗುತ್ತಿದೆ. ಈ ವರ್ಷ ಜೂನ್‌ನಲ್ಲೇ ಈ ಫಾಸ್ಟ್‌ಟ್ಯಾಗ್ ಪಾಸ್ ಕುರಿತು ಘೋಷಣೆ ಮಾಡಲಾಗಿದ್ದು, ಇದು ಕೇವಲ ಖಾಸಗಿ ಹಾಗೂ ವಾಣಿಜ್ಯೇತರ ವಾಹನಗಳಿಗಷ್ಟೇ ಸೀಮಿತವಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ವಹಿಸುವ ಭಾರತದ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ, ಫಾಸ್ಟ್‌ಟ್ಯಾಗ್, ಹೊಸ ವಾರ್ಷಿಕ ಪಾಸ್‌ನ ಪರಿಚಯದೊಂದಿಗೆ ಗಮನಾರ್ಹ ನವೀಕರಣವನ್ನು ಪಡೆಯಲಿದ್ದು, ವಿಶೇಷವಾಗಿ ಆಗಾಗ್ಗೆ ಪ್ರಯಾಣಿಸುವವರಿಗೆ ಇದು ಪ್ರಯೋಜನವನ್ನು ನೀಡುತ್ತದೆ.ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
https://x.com/NHAI_Official/status/1954898094132502909
ಏನಿದು ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್?
ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್, ಕಾರುಗಳು, ಜೀಪ್‌ಗಳು, ವ್ಯಾನ್‌ಗಳಂತಹ ಖಾಸಗಿ, ವಾಣಿಜ್ಯೇತರ ವಾಹನಗಳಿಗೆ ಲಭ್ಯವಿರುವ ಒಂದು-ಬಾರಿ ಪ್ರಿಪೇಯ್ಡ್ ಟೋಲ್ ಯೋಜನೆಯಾಗಿದ್ದು, 200-ಟ್ರಿಪ್‌ಗಳ ಮಿತಿ ಅಥವಾ ಒಂದು ವರ್ಷದ ಮಾನ್ಯತೆಯನ್ನು ಹೊಂದಿರುತ್ತದೆ. ಈ ಫಾಸ್ಟ್‌ಟ್ಯಾಗ್ ರಾಜ್ಯ ಹೆದ್ದಾರಿಗಳು, ರಾಜ್ಯ-ಚಾಲಿತ ಎಕ್ಸ್‌ಪ್ರೆಸ್‌ವೇಗಳು ಮತ್ತು ಸ್ಥಳೀಯ ರಸ್ತೆಗಳಲ್ಲಿ ಪ್ರಮಾಣಿತ ಟೋಲ್ ಸಂಗ್ರಹ ವ್ಯವಸ್ಥೆಯಾಗಿ ಉಳಿಯುತ್ತದೆ. ಆದರೂ ಇದು ಪ್ರಾಥಮಿಕವಾಗಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿನ ಟೋಲ್‌ಗಳನ್ನು ಒಳಗೊಂಡಿರುತ್ತದೆ .
ಅವಧಿ ಅಥವಾ ಟ್ರಿಪ್
ಒಮ್ಮೆ ನೀವು ಈ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಖರೀದಿಸಿದರೆ ಇದು ಗರಿಷ್ಠ 200 ಟ್ರಿಪ್ ಅಥವಾ ಒಂದಿಡೀ ವರ್ಷ ಟೋಲ್ ಬಳಕೆಯ ಅವಧಿ ಹೊಂದಿರುತ್ತದೆ. ಅಂದರೆ ವಾಹನ ಚಾಲಕ 3000 ರೂ ಪಾವತಿಸಿದರೆ ಒಂದು ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ಗರಿಷ್ಠ 200 ಟ್ರಿಪ್ ಅಥವಾ ಒಂದಿಡೀ ವರ್ಷ ಟೋಲ್ ಬಳಕೆ ಇವುಗಳಲ್ಲಿ ಯಾವುದು ಮೊದಲೋ ಅದನ್ನು ಬಳಕೆಗೆ ಅನುಮತಿಸುತ್ತದೆ.
ಹೊಸ FASTag ಖರೀದಿಸುವ ಅಗತ್ಯವಿಲ್ಲ
ಈ ಫಾಸ್ಟ್ ಟ್ಯಾಗ್ ಪಾಸ್‌ಗಾಗಿ ಪ್ರತ್ಯೇಕವಾಗಿ ಫಾಸ್ಟ್ ಟ್ಯಾಗ್ ಖರೀದಿಸಬೇಕೆಂದೇನೂ ಇಲ್ಲ. ಹಾಲಿ ಚಾಲ್ತಿಯಲ್ಲಿರುವ ಫಾಸ್ಟ್‌ಟ್ಯಾಗ್ ಅನ್ನೇ ಮೇಲ್ದರ್ಜೆಗೇರಿಸಬಹುದಾಗಿದೆ. ನಿಮ್ಮ ಅಸ್ತಿತ್ವದಲ್ಲಿರುವ FASTag ನಲ್ಲಿ ಸಕ್ರಿಯಗೊಳ್ಳುತ್ತದೆ. ಅಂತೆಯೇ ಈ ವಾರ್ಷಿಕ ಪಾಸ್ ಅನ್ನು ವರ್ಗಾಯಿಸಲಾಗುವುದಿಲ್ಲ ಮತ್ತು FASTag ನೋಂದಾಯಿಸಲಾದ ಮತ್ತು ಅಂಟಿಸಲಾದ ನಿರ್ದಿಷ್ಟ ವಾಹನಕ್ಕೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಹೇಳಲಾಗಿದೆ.
FASTag ವಾರ್ಷಿಕ ಪಾಸ್ ಖರೀದಿ ನಂತರ ಏನು ಮಾಡಬೇಕು?
ನೀವು FASTag ವಾರ್ಷಿಕ ಪಾಸ್ ಅನ್ನು ಖರೀದಿಸಿದ ನಂತರ, ಅದು ನಿಮ್ಮ ಅಸ್ತಿತ್ವದಲ್ಲಿರುವ FASTag ಖಾತೆ ಮತ್ತು ವಾಹನ ನೋಂದಣಿ ಸಂಖ್ಯೆಗೆ ಲಿಂಕ್ ಆಗುತ್ತದೆ. ಪಾಸ್ 200 ಟೋಲ್ ವಹಿವಾಟುಗಳನ್ನು ಅನುಮತಿಸುತ್ತದೆ. ಅಥವಾ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಇದು ಮಾನ್ಯವಾಗಿರುತ್ತದೆ. ಯಾವುದು ಮೊದಲು ಬರುತ್ತದೆಯೋ ಅದು. ನೀವು ಪ್ರತಿ ಬಾರಿ NHAI ಅಥವಾ MoRTH ನಿರ್ವಹಿಸುವ ಅರ್ಹ ಟೋಲ್ ಪ್ಲಾಜಾದ ಮೂಲಕ ಹಾದು ಹೋದಾಗ, ನಿಮ್ಮ ವಾರ್ಷಿಕ ಮಿತಿಯಿಂದ ಒಂದು ಟ್ರಿಪ್ ಅನ್ನು ಕಡಿತಗೊಳಿಸಲಾಗುತ್ತದೆ. 200-ಟ್ರಿಪ್ ಮಿತಿ ಅಥವಾ ಒಂದು ವರ್ಷದ ಅವಧಿಯನ್ನು ತಲುಪಿದ ನಂತರ, ನಿಮ್ಮ FASTag ಖಾತೆಯು ಸ್ವಯಂಚಾಲಿತವಾಗಿ ನಿಯಮಿತ ಪೇ-ಪರ್-ಯೂಸ್ ಮಾದರಿಗೆ ಹಿಂತಿರುಗುತ್ತದೆ. ಪಾಸ್ ಅನ್ನು ವರ್ಗಾಯಿಸಲಾಗುವುದಿಲ್ಲ, ಮರುಪಾವತಿಸಲಾಗುವುದಿಲ್ಲ ಮತ್ತು ರಾಷ್ಟ್ರೀಯ ಹೆದ್ದಾರಿ ಅಥವಾ ಯೋಜನೆಯಿಂದ ಒಳಗೊಳ್ಳಲ್ಪಟ್ಟ ಎಕ್ಸ್‌ಪ್ರೆಸ್‌ವೇ ನೆಟ್‌ವರ್ಕ್‌ನ ಹೊರಗಿನ ಟೋಲ್‌ಗಳಲ್ಲಿ ಬಳಸಲಾಗುವುದಿಲ್ಲ.200 ಟ್ರಿಪ್ ಅಥವಾ 1 ವರ್ಷದ ಅವಧಿ ಮುಗಿದ ಬಳಿಕ ಮತ್ತೆ ಚಾಲಕ ಅದನ್ನು ನವೀಕರಿಸಬೇಕಾಗುತ್ತದೆ. ಇದಕ್ಕಾಗಿ ಆತ ಮತ್ತೆ 3000 ರೂ ಪಾವತಿಸಿ FASTag Annual Pass ನವೀಕರಿಸಬೇಕಾಗುತ್ತದೆ.
ಟ್ರಿಪ್ ಗೊಂದಲಕ್ಕೆ ತೆರೆ
ಇದೇ ವೇಳೆ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನಗಳ ಟ್ರಿಪ್ ಕುರಿತ ಗೊಂದಲಕ್ಕೂ ತೆರೆ ಎಳೆದಿದ್ದು, ಒಂದೊಂದು ಟೋಲ್ ಗೆ ಒಂದೊಂದು ಟ್ರಿಪ್ ಎಂದು ಲೆಕ್ಕ ಹಾಕಲಾಗುತ್ತದೆ ಎಂದು ಹೇಳಲಾಗಿದೆ. ಒಂದು ಸ್ಥಾನದಿಂದ ಮತ್ತೊಂದು ಗಮ್ಯ ಸ್ಥಾನದ ನಡುವೆ 4 ಟೋಲ್ ಗಳು ಬಂದರೆ ಆಗ ಅದನ್ನು 4 ಟ್ರಿಪ್ ಎಂದು ಪರಿಗಣಿಸಲಾಗುತ್ತದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಖಾಸಗಿ ಟೋಲ್ ಗೆ ಅನ್ವಯವಾಗಲ್ಲ
ವಾರ್ಷಿಕ ಟೋಲ್ ಫಾಸ್ಟ್ಯಾಗ್ ಪಾಸ್ ಕೇವಲ ರಾಷ್ಟ್ರೀಯ ಹೆದ್ದಾರಿಗಳಿಗೆ ಅನ್ವಯವಾಗುತ್ತದೆ. ರಾಜ್ಯ ಹೆದ್ದಾರಿಗಳಿಗೆ ಹಾಗೂ ಬೆಂಗಳೂರಿನ ನೈಸ್ (NICE)ನಂಥ ಖಾಸಗಿ ಹೆದ್ದಾರಿಗೆ ಅನ್ವಯವಾಗಲ್ಲ. ರಾಜ್ಯ ಹೆದ್ದಾರಿ ಹಾಗೂ ಖಾಸಗಿ ಹೆದ್ದಾರಿಗಳಲ್ಲಿ ಸಂಚರಿಸುವವರು ಎಂದಿನ ಟೋಲ್ ದರವನ್ನೇ ಪಾವತಿಸಬೇಕು ಎಂದು ಹೇಳಲಾಗಿದೆ.