ಸಮಗ್ರ ಹಣಕಾಸು ಸೇವೆಗಳ ತಾಣ ನವಿ ಟೆಕ್ನಾಲಜಿಸ್ ಲಿಮಿಟೆಡ್ ಇನ್ಮುಂದೆ ʼನವಿ ಲಿಮಿಟೆಡ್ʼ

ಹೊಸದಿಗಂತ ವರದಿ ಬೆಂಗಳೂರು :

ನವಿ ಟೆಕ್ನಾಲಜಿಸ್ ಲಿಮಿಟೆಡ್ ಸಂಸ್ಥೆಯ ಹೆಸರು ಬದಲಾಯಿಸಿದ್ದು ಹೊಸದಾಗಿ “ ನವಿ ಲಿಮಿಟೆಡ್” ಎಂದು ಘೋಷಿಸಿದೆ. ಭಾರತೀಯ ಗ್ರಾಹಕರ ಅಗತ್ಯಗಳ ಸುತ್ತ ನಿರ್ಮಿಸಲಾದ ಸಮಗ್ರ ಹಣಕಾಸು ಸೇವೆಗಳ ತಾಣವಾಗಿ ವಿಕಸನಗೊಳ್ಳುವುದರೊಂದಿಗೆ ಈ ಬದಲಾವಣೆಯನ್ನು ತರಲಾಗಿದೆ.

ಸಂಸ್ಥೆಯ ಹೆಸರು ಬದಲಾವಣೆ ಸಂಯೋಜಿತ , ಗ್ರಾಹಕ ಕೇಂದ್ರಿತ ಸಂಸ್ಥೆಯಾಗಿ ಸಾಲ, ವಿಮೆ, ಆಸ್ತಿ ನಿರ್ವಹಣೆ ಮತ್ತು UPI ಸೇವೆಗಳನ್ನು ಒಳಗೊಂಡ ಹಾಗೂ ಹಣವನ್ನು ಸರಳ, ಸರಾಗಗೊಳಿಸಿ ಪ್ರತಿಯೊಬ್ಬ ಭಾರತೀಯನಿಗೂ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ಎತ್ತಿತೋರಿಸುತ್ತದೆ.

“ನಾವು ಈಗ ಏನಾಗಿದ್ದೇವೆ ಎಂಬುದಕ್ಕೆ ಈ ಹೊಸ ಹೆಸರು ಸೂಕ್ತವಾಗಿದೆ. ನಾವು ಟೆಕ್ನಾಲಜಿ ಪೂರೈಕೆದಾರರು ಮಾತ್ರವಲ್ಲ, ನಮ್ಮ ಗ್ರಾಹಕರಿಗೆ ಪರಿಪೂರ್ಣ ಹಣಕಾಸು ಸೇವೆ ಪೂರೈಕೆದಾರರು ಕೂಡ” ಎಂದು ನವಿ ಗ್ರೂಪ್‌ನ ಸಹ ಸಂಸ್ಥಾಪಕ ಮತ್ತು ಎಕ್ಸಿಕ್ಯೂಟಿವ್ ಚೇರ್‍ಮನ್ ಸಚಿನ್‌ ಬನ್ಸಲ್‌ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನವಿ ಲಿಮಿಟೆಡ್ ನ ಎಂಡಿ ಮತ್ತು ಸಿಇಒ ರಾಜೀವ್‌ ನರೇಶ್ , “ ಈ ಬದಲಾವಣೆ ಸಂಸ್ಥೆಯ ಬೆಳವಣಿಗೆಯನ್ನು ತೋರುತ್ತದೆ. ನಮ್ಮ ಯೋಜನೆಗಳು ವಿಸ್ತಾರಗೊಳ್ಳುತ್ತಿವೆ. ಹೆಚ್ಚು ಸಂಯೋಜಿತ, ಹೆಚ್ಚು ಗ್ರಾಹಕ ಕೇಂದ್ರಿತ ಹಾಗೂ ಬೆಳವಣಿಗೆಯ ಮುಂದಿನ ಹಂತಕ್ಕೆ ಸಂಸ್ಥೆ ರೆಡಿಯಾಗಿದ್ದು, ಬದಲಾದ ಹೆಸರು ಈ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ”.ಎಂದರು.

ಭಾರತೀಯರು UPI ಮೂಲಕ ಡಿಜಿಟಲ್ ಪಾವತಿಗಳೊಂದಿಗೆ ಪ್ರಾರಂಭಿಸುತ್ತಿರಲಿ ಅಥವಾ ಹೂಡಿಕೆಗಳು ಮತ್ತು ವಿಮೆಯ ಮೂಲಕ ದೀರ್ಘಕಾಲೀನ ಗುರಿಗಳನ್ನು ಯೋಜಿಸುತ್ತಿರಲಿ, ಅವರ ಆರ್ಥಿಕ ಪ್ರಯಾಣದ ಪ್ರತಿಯೊಂದು ಹಂತದಲ್ಲೂ ಸೇವೆ ಸಲ್ಲಿಸಲು ನವಿಯ ಕೊಡುಗೆಗಳನ್ನು ನಿರ್ಮಿಸಲಾಗಿದೆ. ಪಾರದರ್ಶಕತೆ, ವೇಗ ಮತ್ತು ನಂಬಿಕೆಯಲ್ಲಿ ಲಂಗರು ಹಾಕಿದ ಏಕೀಕೃತ, ತಡೆರಹಿತ ಸೇವೆಯ ಕಡೆ ಹೆಚ್ಚು ಗಮನ ಹರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!