ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ಹಳದಿ ಮಾರ್ಗದ ಜನ ಸಂಚಾರದ ಮೊದಲ ದಿನವೇ ಎಲ್ಲಾ ಮೂರು ರೈಲುಗಳು ಸಂಪೂರ್ಣ ಭರ್ತಿಯಾಗಿ ಸಂಚರಿಸಿದ್ದು, ಹೊಸ ಮಾರ್ಗದಲ್ಲಿ ಪ್ರಯಾಣಿಸಿದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 6.30ಕ್ಕೆ ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದಿಂದ ರೈಲು ಸಂಚಾರ ಆರಂಭವಾಯಿತು. ಹೊಸಮಾರ್ಗ, ಹೊಸ ಮಾದರಿಯ ರೈಲಿನಲ್ಲಿ ಪ್ರಯಾಣಿಸಲು ಜನರು ಉತ್ಸುಕರಾಗಿದ್ದರು. ರೈಲಿನಲ್ಲಿ ನಿತ್ಯ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವ ಟೆಕ್ಕಿಗಳು, ಗಾರ್ಮೆಂಟ್ಸ್ ನೌಕರರು, ಕಾರ್ಖಾನೆ ನೌಕರರು ಹೆಚ್ಚಾಗಿ ಕಂಡು ಬಂದರು.
ಮೆಟ್ರೋದ ಈ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಇದ್ದು, 19.15 ಕಿಲೋ ಮೀಟರ್ ಉದ್ದವಿದೆ. ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಮೂರು ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ.