ಹೊಸದಿಗಂತ ಡಿಜಿಟಲ್ ಡೆಸ್ಕ್:
ರಜನಿಕಾಂತ್ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಅದೆಷ್ಟೋ ದಾಖಲೆಗಳನ್ನು ಬರೆದಾಗಿದೆ. ಈಗ ಅವರ ನಟನೆಯ ‘ಕೂಲಿ’ ಸಿನಿಮಾ ರಿಲೀಸ್ಗೆ ರೆಡಿ ಇದೆ.
ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಮೊದಲ ದಿನದ ಗಳಿಕೆಯಲ್ಲಿ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬ ಕುತೂಹಲ ಮೂಡಿದೆ. ಅದಕ್ಕೂ ಮೊದಲೇ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಲು ರೆಡಿ ಆಗಿದೆ. ಅಡ್ವಾನ್ಸ್ ಬುಕಿಂಗ್ನಿಂದಲೇ ಚಿತ್ರಕ್ಕೆ 75 ಕೋಟಿ ರೂಪಾಯಿ ಹರಿದು ಬಂದಿದೆ. ಇಷ್ಟೊಂದು ಗಳಿಕೆಗೆ ಕಾರಣ ಆಗ್ತಿರೋದು ಸಿನಿಮಾದ ಟಿಕೆಟ್ ದರ.
ಸನ್ ಪಿಕ್ಚರ್ಸ್ ‘ಕೂಲಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಕಲಾನಿಧಿ ಮಾರನ್ ಅವರು ದೊಡ್ಡ ಬಜೆಟ್ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ, ತೆಲುಗು ಭಾಷೆಗಳಿಂದ ಪ್ಯಾನ್ ಇಂಡಿಯಾ ಸಿನಿಮಾಗಳು ಬರುತ್ತಿವೆ. ಆದರೆ, ತಮಿಳಿನಲ್ಲಿ ಮಾತ್ರ ಪ್ಯಾನ್ ಇಂಡಿಯಾ ಸಿನಿಮಾಗಳು ಸಿದ್ಧವಾಗುತ್ತಿಲ್ಲ ಎನ್ನುವ ಬೇಸರ ಅವರಿಗೆ ಇದೆ. ಈ ಕಾರಣದಿಂದಲೇ ‘ಕೂಲಿ’ಯನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಅವರು ರೆಡಿ ಆಗಿದ್ದಾರೆ. ಸಿನಿಮಾ ಹೈಪ್ ಹೆಚ್ಚಿದಂತೆ ಟಿಕೆಟ್ ಬೆಲೆ ಕೂಡ ಹೆಚ್ಚಿದೆ.
‘ಕೂಲಿ’ ಸಿನಿಮಾ ಚೆನ್ನೈನಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರ ಚೆನ್ನೈನ ಬಹುತೇಕ ಮಲ್ಟಿಪ್ಲೆಕ್ಸ್ನಲ್ಲಿ 183 ರೂಪಾಯಿಗೆ ವೀಕ್ಷಣೆಗೆ ಸಿಗುತ್ತಿದೆ. ಕೆಲವು ಕಡೆಗಳಲ್ಲಿ 190 ರೂಪಾಯಿ ಇದೆ. ಆದರೆ, ಎಲ್ಲಿಯೂ 200ರ ಗಡಿ ದಾಟಿಲ್ಲ. ಆದರೆ, ಬೆಂಗಳೂರಿನ ಮಲ್ಟಿಪ್ಲೆಕ್ಸ್ನಲ್ಲಿ ಈ ದರ ಗಗನಕ್ಕೇರಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಟಿಕೆಟ್ ಬೆಲೆಯೆನ್ನು 250-300 ರೂಪಾಯಿಗೆ ಏರಿಸಿಕೊಂಡು ಕುಳಿತಿವೆ. ಇನ್ನು, ಮಲ್ಟಿಪ್ಲೆಕ್ಸ್ಗಳಲ್ಲಿ 400 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭ! ಕೆಲವು ಕಡೆಗಳಲ್ಲಿ 500, 600 ಸಾವಿರ ಹೀಗೆ ದುಬಾರಿ ಆಗಿಯೇ ಇದೆ. ಜನ ಸಾಮಾನ್ಯರಿಗೆ ಈ ದರ ಎಟುಕುವ ರೀತಿಯಲ್ಲಿ ಇಲ್ಲ!