September 30, 2026
Wednesday, September 30, 2026
spot_img

ಕಾಸರಗೋಡು ಕೇರಳದ ಸೌರ ಕೇಂದ್ರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಸರಗೋಡು ಕೇರಳದ ಸೌರ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಚೀಮೇನಿ ಗ್ರಾಮ ಪಂಚಾಯತ್ ಮೈದಾನದಲ್ಲಿ ಭಾನುವಾರ ಚೀಮೇನಿ ಮತ್ತು ಪೆರ್ಡಾಲ ಎಸ್ಟೇಟ್‌ಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳ ನಿರ್ಮಾಣ ಕಾರ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ ಪೈವಳಿಕೆ, ಅಂಬಲತ್ತರ ಮತ್ತು ಕರಿಂದಳಂದಲ್ಲಿ ಸೌರ ವಿದ್ಯುತ್ ಸ್ಥಾವರಗಳಿವೆ. ಚೀಮೇನಿ ಮತ್ತು ಪೆರ್ಡಾಲದಲ್ಲಿ ಸೌರ ವಿದ್ಯುತ್ ಸ್ಥಾವರಗಳು ಸ್ಥಾಪನೆಯಾಗುವುದರೊಂದಿಗೆ ಕಾಸರಗೋಡು ಕೇರಳದ ಸೌರ ಕೇಂದ್ರವಾಗಲಿದೆ ಎಂದು ಮುಖ್ಯಮಂತ್ರಿ ನುಡಿದರು.

ತೃಕ್ಕರೀಪ್ಪುರ ಶಾಸಕ ಎಂ.ರಾಜಗೋಪಾಲನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಕಯ್ಯೂರು ಚೀಮೇನಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಂ.ಪಿ.ವಿ.ಜಾನಕಿ, ವಾರ್ಡ್ ಸದಸ್ಯೆ ಎ.ವಿ.ಲಲಿತಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಽಗಳು ಮತ್ತಿತರರು ಉಪಸ್ಥಿತರಿದ್ದರು.

ನೇಚರ್ ಡ್ಯೂ ಎನರ್ಜಿ ಎಂಡಿ ಮಾಹಿನ್ ಸುಬೈರ್ ಸ್ವಾಗತಿಸಿದರು. ಕೇರಳ ಪ್ಲಾಂಟೇಶನ್ ಕಾರ್ಪೋರೇಷನ್ ಅಧ್ಯಕ್ಷ ಒ.ಪಿ.ಸಲಾಂ ಧನ್ಯವಾದವಿತ್ತರು.

Must Read