ಮೊಸರು ನಮ್ಮ ಆಹಾರದಲ್ಲಿ ಪೋಷಕಾಂಶಗಳಿಂದ ಸಮೃದ್ಧವಾದ ಒಂದು ಪ್ರಮುಖ ಅಂಶ. ಇದರಲ್ಲಿ ಕ್ಯಾಲ್ಸಿಯಂ, ಲ್ಯಾಕ್ಟಿಕ್ ಆಮ್ಲ, ವಿಟಮಿನ್ B12 ಮುಂತಾದ ಅನೇಕ ಪೋಷಕಾಂಶಗಳಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕವಾಗುತ್ತದೆ. ದಿನನಿತ್ಯದ ಆಹಾರದಲ್ಲಿ ಮೊಸರನ್ನು ಸೇರಿಸುವುದು ದೇಹಕ್ಕೆ ತಂಪು, ಶಕ್ತಿ ಮತ್ತು ಪೋಷಣೆಯನ್ನು ನೀಡುತ್ತದೆ.
ಆದರೆ, ಪೌಷ್ಟಿಕ ತಜ್ಞರ ಪ್ರಕಾರ ಮೊಸರು ತಿಂದ ತಕ್ಷಣ ನೀರು ಕುಡಿಯುವುದು ತಪ್ಪು ಪದ್ಧತಿ. ಇದು ಹೊಟ್ಟೆಯ ಆಮ್ಲ ಕ್ರಿಯೆಯನ್ನು ದುರ್ಬಲಗೊಳಿಸಿ, ಜೀರ್ಣ ಸಮಸ್ಯೆಗಳು, ಹೊಟ್ಟೆ ಉಬ್ಬರ ಹಾಗೂ ನೋವು ಉಂಟುಮಾಡಬಹುದು. ಜೊತೆಗೆ ಮೊಸರಿನಲ್ಲಿರುವ ಪ್ರೋಬಯಾಟಿಕ್ ಗುಣಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಕನಿಷ್ಠ ಅರ್ಧ ಗಂಟೆ ಬಳಿಕ ಮಾತ್ರ ನೀರು ಕುಡಿಯುವುದು ಉತ್ತಮ.
ಇದಲ್ಲದೆ, ಮೊಸರು ತಿಂದ ತಕ್ಷಣ ಹಣ್ಣು, ಮೀನು, ಮೊಟ್ಟೆ, ಕರಿದ ಆಹಾರ, ಉಪ್ಪಿನಕಾಯಿ, ಚಹಾ, ಕಾಫಿ ಮತ್ತು ಈರುಳ್ಳಿ ಸೇವನೆ ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ. ಸಂಜೆ ಅಥವಾ ರಾತ್ರಿ ಮೊಸರು ತಿನ್ನುವುದರಿಂದ ಶೀತ ಹಾಗೂ ಕೆಮ್ಮಿನಂತಹ ತೊಂದರೆಗಳು ಹೆಚ್ಚುವ ಸಾಧ್ಯತೆ ಇರುವುದರಿಂದ, ಬೆಳಗಿನ ಅಥವಾ ಮಧ್ಯಾಹ್ನದ ಊಟದಲ್ಲಿ ಮೊಸರು ಸೇರಿಸುವುದು ಹೆಚ್ಚು ಆರೋಗ್ಯಕರ.
ಮೊಸರಿನಲ್ಲಿರುವ ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಅಂಶಗಳು ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯಲು ಸಹಾಯಕವಾಗುತ್ತವೆ. ಪ್ರತಿದಿನ ಒಂದು ಕಪ್ ಮೊಸರು ಸೇವನೆಯಿಂದ ದೇಹ ಹೈಡ್ರೇಟೆಡ್ ಆಗಿ, ರೋಗನಿರೋಧಕ ಶಕ್ತಿ ಉತ್ತಮವಾಗಿರುತ್ತದೆ.
ಮೊಸರು ಪೋಷಕಾಂಶಗಳಿಂದ ಸಮೃದ್ಧವಾದರೂ, ಅದರ ಲಾಭಗಳನ್ನು ಪಡೆಯಲು ಸರಿಯಾದ ಸಮಯದಲ್ಲಿ, ಸರಿಯಾದ ವಿಧಾನದಲ್ಲಿ ಸೇವನೆ ಮಾಡುವುದು ಮುಖ್ಯ. ತಕ್ಷಣ ನೀರು ಕುಡಿಯದೇ, ಸಂಜೆ/ರಾತ್ರಿ ಸೇವನೆ ತಪ್ಪಿಸಿ, ದಿನದ ಬಿಸಿಲಿನ ಹೊತ್ತಿನಲ್ಲಿ ಮೊಸರು ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ.