ಪ್ರಕೃತಿಯಲ್ಲಿರುವ ಅನೇಕ ತರಕಾರಿಗಳು ನಮ್ಮ ಆರೋಗ್ಯಕ್ಕೂ ತ್ವಚೆಗೂ ಔಷಧಿಯಂತೆ ಕೆಲಸ ಮಾಡುತ್ತವೆ. ಆ ಪೈಕಿ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಸದಾ ದೊರೆಯುವ ಆಲೂಗಡ್ಡೆ ಕೇವಲ ಊಟಕ್ಕೆ ಸೀಮಿತವಾಗಿರುವುದಿಲ್ಲ, ಇದು ತ್ವಚೆಯ ಆರೈಕೆಯಲ್ಲಿ ಸಹ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಹಳೆಯ ಕಾಲದಿಂದಲೇ ಅಜ್ಜಿಯರು ಮನೆಮದ್ದುಗಳಲ್ಲಿ ಆಲೂಗಡ್ಡೆಯನ್ನು ಬಳಸುತ್ತಿದ್ದರು. ಇದರಲ್ಲಿ ಇರುವ ವಿಟಮಿನ್ ಸಿ, ಕಿಣ್ವಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಮೃದುವಾಗಿಸಿ, ಕಾಂತಿಯುತವಾಗಿಸುತ್ತವೆ. ನೈಸರ್ಗಿಕ ಸ್ಕಿನ್ ಕೇರ್ ಪರಿಹಾರಗಳಲ್ಲಿ ಆಲೂಗಡ್ಡೆ ವಿಶೇಷ ಸ್ಥಾನವನ್ನು ಪಡೆದಿದೆ.
ಕಾಂತಿಯುತ ಚರ್ಮ ನೀಡುವುದು ಆಲೂಗಡ್ಡೆಯಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುವುದರಿಂದ ಇದು ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದರಿಂದ ಚರ್ಮದ ಟೋನ್ ಒಂದೇರೀತಿಯಲ್ಲಿರುವಂತೆ ಮಾಡುತ್ತದೆ.
ಕಪ್ಪು ವರ್ತುಲಗಳನ್ನು ಕಡಿಮೆ ಮಾಡುವುದು ಕಣ್ಣುಗಳ ಕೆಳಗಿನ ಡಾರ್ಕ್ ಸರ್ಕಲ್‌ಗಳನ್ನು ಕಡಿಮೆ ಮಾಡಲು ಆಲೂಗಡ್ಡೆ ಸಹಕಾರಿ. ಆಲೂಗಡ್ಡೆಯಲ್ಲಿರುವ ಕ್ಯಾಟೆಕೊಲೇಸ್ ಎಂಬ ಎನ್ಜೈಮ್ ಚರ್ಮದ ಊತವನ್ನು ತಗ್ಗಿಸಿ ಕಪ್ಪು ಚಿಹ್ನೆಗಳನ್ನು ಹಗುರಗೊಳಿಸುತ್ತದೆ.
ಮೊಡವೆ ನಿವಾರಣೆ ಆಲೂಗಡ್ಡೆ ಉರಿಯೂತ ವಿರೋಧಿ ಗುಣ ಹೊಂದಿರುವುದರಿಂದ ಮೊಡವೆಯಿಂದ ಉಂಟಾಗುವ ಕೆಂಪು ಬಣ್ಣ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಪೊಟ್ಯಾಸಿಯಮ್ ಅಂಶವು ಚರ್ಮದ ತೈಲ ಉತ್ಪಾದನೆಯನ್ನು ನಿಯಂತ್ರಿಸುತ್ತದೆ.
ಸನ್‌ಬರ್ನ್ ಶಮನ ಬಿಸಿಲಿನಲ್ಲಿ ಉಂಟಾಗುವ ಸನ್‌ಬರ್ನ್ ಮತ್ತು ಕಿರಿಕಿರಿಯನ್ನು ಆಲೂಗಡ್ಡೆಯ ತಂಪಾದ ಗುಣ ಶಮನಗೊಳಿಸುತ್ತದೆ. ಚರ್ಮದ ಮೇಲೆ ಆಲೂಗಡ್ಡೆಯ ರಸ ಅಥವಾ ಸ್ಲೈಸ್ ಹಚ್ಚಿದರೆ ತಕ್ಷಣ ತಂಪಾದ ಅನುಭವ ನೀಡುತ್ತದೆ.
ಆಲೂಗಡ್ಡೆ ಅಡುಗೆ ಮನೆಯಲ್ಲಿ ಇರುವ ಸರಳ ತರಕಾರಿ ಮಾತ್ರವಲ್ಲ, ತ್ವಚೆಗಾಗಿ ಪ್ರಾಕೃತಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಇದರಿಂದ ಚರ್ಮ ಹೊಳೆಯುವಂತೆ, ತಾಜಾ ಹಾಗೂ ಆರೋಗ್ಯಕರವಾಗಿ ಕಾಣಲು ಸಾಧ್ಯ. ಆದರೆ ಸೂಕ್ಷ್ಮ ಚರ್ಮ ಹೊಂದಿರುವವರು ಮೊದಲು ಪ್ಯಾಚ್ ಟೆಸ್ಟ್ ಮಾಡಿ ಬಳಸುವುದು ಒಳಿತು.