ಕೃಷ್ಣ ಜನ್ಮಾಷ್ಟಮಿಯಂದೇ ಮುದ್ದು ಮಗನಿಗೆ ನಾಮಕರಣ ಮಾಡಿದ ನಟ ವಸಿಷ್ಠ-ಹರಿಪ್ರಿಯಾ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ತಮ್ಮ ಮುದ್ದಾದ ಮಗನಿಗೆ ಕೃಷ್ಣ ಜನ್ಮಾಷ್ಟಮಿಯಂದೇ ನಾಮಕರಣ ಮಾಡಿದ್ದಾರೆ.

ದಂಪತಿಯು ಪುಟ್ಟ ಕೃಷ್ಣನಿಗೆ ವಿಪ್ರಾ ಎನ್ ಸಿಂಹ ಎಂದು ಹೆಸರಿಟ್ಟಿದ್ದಾರೆ.

2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2025 ಜನವರಿ 26ರಂದು ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇದೀಗ ದಂಪತಿಗಳು ಮಗನ ನಾಮಕರಣದ ಸಂಭ್ರಮದಲ್ಲಿದ್ದಾರೆ. ಸದ್ಯ ಸಿಂಹಪ್ರಿಯ ಜೋಡಿಯ ಮಗನ ನಾಮಕರಣದ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಮಕರಣ ಕಾರ್ಯಕ್ರಮದಲ್ಲಿ ನಟಿ ಪ್ರಣಿತಾ, ಸೊನಾಲ್, ಕೆಜಿಎಫ್ ಖ್ಯಾತಿಯ ಗರುಡ ರಾಮ್ ಹಾಗೂ ಇನ್ನಿತರ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!