ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತುಹಾಕಲಾಗಿದೆ ಎಂಬ ಅನಾಮಿಕನ ದೂರಿನ ಎಸ್ ಐಟಿ ತನಿಖೆಯ ಮೊದಲ ಹಂತ ಪೂರ್ಣಗೊಂಡಿತೇ?
ಹೀಗೊಂದು ಅನುಮಾನ ಸಾರ್ವಜನಿಕರು, ಇಲಾಖಾ ವಲಯದಲ್ಲಿ ಕಂಡುಬರುತ್ತಿದೆ. ಇದಕ್ಕೆ ಪೂರಕವಾಗಿ ಘಟನಾ ಸ್ಥಳದಲ್ಲಿ ಕೆಲವೊಂದು ಬೆಳವಣಿಗೆಗಳು ಕಾಣಿಸಿಕೊಳ್ಳುತ್ತಿದ್ದು, ಶೋಧ ಕಾರ್ಯದಲ್ಲಿದ್ದ ಕಾರ್ಮಿಕರನ್ನು ಕರೆಸಿ ಅವರಿಂದ ಅಗತ್ಯ ಬೇಕಾದ ದಾಖಲೆ ಸಂಗ್ರಹ ಕಾರ್ಯ ನಡೆದಿದೆ. ಜೊತೆಗೆ ಮುಂದೆ ಅವರನ್ನು ಅಗತ್ಯ ಸಂದರ್ಭ ಕರೆಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ.
ಈ ನಡುವೆ ಕಾರ್ಯಾಚರಣೆ ತಂಡದ ಕೆಲವು ಸದಸ್ಯರು ಶನಿವಾರ ಎಸ್ ಐಟಿ ತಂಡದಿಂದ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಎಸ್ ಐಟಿ ಮಾತ್ರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.