ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಆರ್ಥಿಕ ಉನ್ನತಿ. ಕೌಟುಂಬಿಕ ಭಿನ್ನಮತ ಶಾಂತಿಯಿಂದ ಬಗೆಹರಿಸಿ.ವಿವಾದಕ್ಕೆ ಎಡೆ ಮಾಡದಿರಿ.  ಸಣ್ಣಪುಟ್ಟ ಗಾಯವಾಗುವ  ಸಾಧ್ಯತೆ, ಎಚ್ಚರ ವಹಿಸಿ.
ವೃಷಭ
ಮನಬಂದಂತೆ ಖರ್ಚು ಮಾಡದಿರಿ. ಉಳಿತಾಯಕ್ಕೂ ಗಮನ ಕೊಡಿ. ಸಾಂಸಾರಿಕ ಸೌಹಾರ್ದ, ಸಾಮರಸ್ಯ. ಬಂಧುಗಳ ಟೀಕೆ.
ಮಿಥುನ
ಸಕಾಲದಲ್ಲಿ ಕಾರ್ಯ ಮುಗಿಸಿ. ಇತರರ ಜತೆ ವ್ಯವಹಾರದಲ್ಲಿ ವಿನಯ ಇರಲಿ. ದಾರ್ಷ್ಟ್ಯ ವರ್ತನೆ ತೋರದಿರಿ. ಹೊಸ ಸ್ನೇಹ ಮೂಡಬಹುದು.
ಕಟಕ
ಪಾಸಿಟಿವ್ ಚಿಂತನೆ ಇಂದು ಅವಶ್ಯ. ಸಣ್ಣ ವಿಷಯಕ್ಕೂ ಕಳವಳ ಅನಗತ್ಯ. ಅಂತಿಮವಾಗಿ ಎಲ್ಲವೂ ನಿಮಗೆ ಪೂರಕವಾಗಿ ಸಾಗಲಿದೆ.
ಸಿಂಹ
ಆತುರದ ಕ್ರಮ ಬೇಡ. ಯೋಚಿಸಿ ಕಾರ್ಯ ಎಸಗಿ. ಸಣ್ಣ ತಪ್ಪು ದೊಡ್ಡ ಪರಿಣಾಮ ಉಂಟು ಮಾಡಬಹುದು. ಸಹನೆ ಅತಿ ಮುಖ್ಯ.
ಕನ್ಯಾ
ಕೌಟುಂಬಿಕ ಶಾಂತಿ, ಸೌಹಾರ್ದ. ಆದಾಯದಲ್ಲಿ ಹೆಚ್ಚಳ. ಹಣದ ವ್ಯವಹಾರದಲ್ಲಿ ಲಾಭ. ಹೊಸ ಸಂಬಂಧ ಬೆಳೆಯುವ ಸಾಧ್ಯತೆ.
ತುಲಾ
ಕೆಲ ಕಾರಣಕ್ಕೆ ಅಶಾಂತ ಮನಸ್ಸು. ಆದರೆ ಅದು ದೀರ್ಘ ಕಾಲ ಉಳಿಯದು. ಹೆಚ್ಚುವರಿ ಹೊಣೆಗಾರಿಕೆ ನಿಮ್ಮನ್ನು ಕಾದಿದೆ, ನಿಭಾಯಿಸಿ.
ವೃಶ್ಚಿಕ
ನಿಮ್ಮ ವ್ಯವಹಾರ ವಿಸ್ತರಿಸುವ ಅವಕಾಶ. ಕಾಲ ಪ್ರಶಸ್ತವಾಗಿದೆ. ಕೌಟುಂಬಿಕ ಪರಿಸರ ಹಿತಕರ. ಯಾವುದೇ ಭಿನ್ನಮತ ಬಾಽಸದು.
ಧನು
ನಿಮ್ಮ ಕಾರ್ಯದಿಂದ ಇತರರ ಮೆಚ್ಚುಗೆ ಪಡೆಯುವಿರಿ. ನಿಮ್ಮ ಗುರಿ ತಲುಪಲು ಕಠಿಣ ಪ್ರಯತ್ನ ನಡೆಸಿರಿ. ಆರೋಗ್ಯ ಸಮಸ್ಯೆ ಕಾಡಬಹುದು.
ಮಕರ
ಆಪ್ತರ ಕುರಿತಂತೆ ಅತಿಯಾದ ಪೊಸೆಸಿವ್ ಧೋರಣೆ ಬಿಡಿ. ಅದರಿಂದ ಸಂಬಂಧ ಹಾಳಾದೀತು. ಮೃದುವಾಗಿ ವರ್ತಿಸುವುದು ಒಳಿತು.
ಕುಂಭ
ಕೌಟುಂಬಿಕ ಭಿನ್ನಮತ ಸ್ವಲ್ಪ ಕಾಲ ನಿಮ್ಮ ಮನಸ್ಸು ಉದ್ವಿಗ್ನ ಮಾಡಬಹುದು. ಬಳಿಕ ಅದು ಸರಿಯಾಗಲಿದೆ. ವೃತ್ತಿಯಲ್ಲಿ ಸಾಧನೆ.
ಮೀನ
ಏಳುಬೀಳಿನ ಕುರಿತು ಸಮಚಿತ್ತ ಹೊಂದಿರುವುದು ಅವಶ್ಯ. ಏಕೆಂದರೆ ಇಂದು ನೀವು ಏರುಪೇರು ಎರಡನ್ನೂ ಅನುಭವಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!