ಸು ಫ್ರಮ್ ಸೋ ಸಿನಿಮಾಗೆ ಮೋಹಕ ತಾರೆ ನಟಿ ರಮ್ಯಾ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಲನಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಸು ಫ್ರಮ್ ಸೋ (Su From So) . ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ ₹100 ಕೋಟಿ ಕಲೆಕ್ಷನ್ ಆಗಿದೆ.

ಈ ಚಿತ್ರ ಬಿಡುಗಡೆ ಆದಾಗಿನಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದ್ದು, ಪ್ರತಿ ದಿನವೂ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಶೋಗಳು ನಡೆಯುತ್ತಿವೆ. ಕಥಾಹಂದರ, ತಾಂತ್ರಿಕ ಕೌಶಲ್ಯ, ಭಾವನಾತ್ಮಕ ನಿರೂಪಣೆ ಹಾಗೂ ಕಲಾವಿದರ ನೈಜ ಅಭಿನಯ ಎಲ್ಲವೂ ಈ ಚಿತ್ರವನ್ನು ಪ್ರೇಕ್ಷಕರ ಹೃದಯದಲ್ಲಿ ಬೇರೂರುವಂತೆ ಮಾಡಿದೆ.

ಇದೀಗ ಕನ್ನಡದ ಮೋಹಕ ತಾರೆ ನಟಿ ರಮ್ಯಾ ಕೂಡಾ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ಸಿನಿಮಾ ಯಶಸ್ವಿಯಾಗಲು ಸ್ಟಾರ್ ನಟರೇ ಇರಬೇಕು ಅನ್ನೋ ನಿಯಮವಿಲ್ಲ. ಕಥೆ ಚೆನ್ನಾಗಿದ್ದರೆ ಜನ ಖಂಡಿತವಾಗಿ ಥಿಯೇಟರ್‌ಗೆ ಬರುತ್ತಾರೆ. ‘ಸು ಫ್ರಮ್ ಸೋ’ ಅದಕ್ಕೆ ಅತ್ಯುತ್ತಮ ಉದಾಹರಣೆ.

ಚಿತ್ರರಂಗದಲ್ಲಿ ಬಹುತೇಕ ಸಿನಿಮಾಗಳು ಸ್ಟಾರ್ ನಟರ ಹೆಸರಿನ ಮೇಲೆ ಓಡುತ್ತವೆ ಎಂಬ ಅಭಿಪ್ರಾಯ ಇದೆ. ಆದರೆ ಸು ಫ್ರಮ್ ಸೋ ಸಿನಿಮಾ ಅದನ್ನು ತಪ್ಪೆಂದು ತೋರಿಸಿದೆ. ಈ ಸಿನಿಮಾ ಯಾವುದೇ ದೊಡ್ಡ ಬಜೆಟ್‌ ಇಲ್ಲದೆ, ಸ್ಟಾರ್ ನಟರಿಲ್ಲದೆ, ಕೇವಲ ಕಥೆಯ ಶಕ್ತಿಯ ಮೇಲೇ ಯಶಸ್ಸು ಸಾಧಿಸಿದೆ. ಇದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಮಾತ್ರವಲ್ಲ, ಸಂಪೂರ್ಣ ಚಿತ್ರರಂಗಕ್ಕೂ ಹೆಮ್ಮೆ ತರಿಸುವ ಸಂಗತಿ ಎಂದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!