ಹೊಸದಿಗಂತ ವರದಿ ಬೆಂಗಳೂರು:
‘ಧರ್ಮಸ್ಥಳ ಮಂಜುನಾಥನನ್ನ ರಕ್ಷಿಸಿ’ ಭಿತ್ತಿ ಪತ್ರ ಹಿಡಿದು ವಿಧಾನಸಭೆ ಪ್ರವೇಶಿಸುವ ಮೂಲಕ ಗುರುಮಿಟಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಿತ್ತಿ ಪತ್ರ ಹಿಡಿದು ಕೆಂಗಾಲ್ ಹನುಮಂತಯ್ಯ ದ್ವಾರದ ಮೂಲಕ ಶಾಸಕ ಕಂದಕೂರ್ ಸದನಕ್ಕೆ ಆಗಮಿಸಿದರು.
ಅನಾಮಧೇಯ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ಪುಣ್ಯಕ್ಷೇತ್ರ ಧರ್ಮಸ್ಥಳದ ಪಾವಿತ್ರಕ್ಕೆ ಧಕ್ಕೆ ತರುವುದು ಸರಿಯಲ್ಲ. ಸೌಜನ್ಯ ಕೇಸ್ ವಿಚಾರವಾಗಿ ನಮ್ಮ ಸಹಕಾರ ಇದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಕ್ರಮ ಆಗಬೇಕು. ಮಂಜುನಾಥನನ್ನ ರಕ್ಷಿಸಿ ದುಷ್ಟರನ್ನ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.