ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಅತಿಯಾದ ಮಾಲಿನ್ಯದಿಂದ ಹೃದಯಾಘಾತ ಆಗುತ್ತಿದೆ. ಇದಕ್ಕೆ ಮಾನಸಿಕ ಒತ್ತಡ, ಬೊಜ್ಜುತನವೂ ಕಾರಣ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪರಿಷತ್ ನಲ್ಲಿಂದು ತಿಳಿಸಿದ್ದಾರೆ.
ಪರಿಷತ್ ನಲ್ಲಿ ಡಾ. ಧನಂಜಯ ಸರ್ಜಿ, ಪ್ರಶ್ನೆಗೆ ಉತ್ತರಿಸಿ, ೪೫ ವರ್ಷದೊಳಗಿನವರು ಹಠಾತ್ ಹೃದಾಯಾಘಾತದಿಂದ ಮೃತಪಡುತ್ತಿರುವುದು ಸರ್ಕಾರದ ಗಮನಕ್ಕಿದೆ. ಬಿಪಿ, ಶುಗರ್ ಇರುವವರಿಗೆ ಶಾಶ್ವತವಾಗಿ ಔಷಧ ನೀಡಬೇಕು. ಇದನ್ನ ನಿಯಂತ್ರಿಸಿದರೆ ಉಳಿದ ಖಾಯಿಲೆ ನಿಯಂತ್ರಣ ಆಗಲಿದೆ. ೮೬ ಆಸ್ಪತ್ರೆಗಳಲ್ಲಿ ಕ್ಯಾತ್ಲಾಬ್ ಇದ್ದು, ಟೆಲಿ ಇಸಿಜಿ ಇಡಿ ರಾಜ್ಯಕ್ಕೆ ವಿಸ್ತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.