February 9, 2026
Monday, February 9, 2026
spot_img

ರಾಜ್ಯದಲ್ಲಿ ಮತ್ತೆ ‘ಏರ್ ಶಾಕ್’ | ವಾಯು ಗುಣಮಟ್ಟ ಕುಸಿತ: ಹಲವು ನಗರಗಳಲ್ಲಿ AQI ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದ ವಾಯು ಗುಣಮಟ್ಟ ಮತ್ತೆ ಕುಸಿತ ಕಾಣುತ್ತಿದೆ. ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಹಠಾತ್ ಏರಿಕೆಯಾಗಿದ್ದು, ಆರೋಗ್ಯದ ದೃಷ್ಟಿಯಿಂದ ಆತಂಕ ಮೂಡಿಸಿದೆ.

ಇಂದಿನ ಅಂಕಿ-ಅಂಶಗಳ ಪ್ರಕಾರ ಶಿವಮೊಗ್ಗದಲ್ಲಿ AQI 196ಕ್ಕೆ ತಲುಪಿದ್ದು, ಇದು ಅನಾರೋಗ್ಯಕರ ಮಟ್ಟದತ್ತ ಸಾಗುತ್ತಿದೆ. ಬೆಂಗಳೂರಿನಲ್ಲಿ 177, ಮಂಗಳೂರು 175 ಮತ್ತು ಮೈಸೂರು 171 AQI ದಾಖಲಾಗಿದೆ. ಬೆಳಗಾವಿಯಲ್ಲಿ 166, ಬಳ್ಳಾರಿ 162, ಉಡುಪಿ 160, ವಿಜಯಪುರ 149, ಹುಬ್ಬಳ್ಳಿ 144 ಹಾಗೂ ಕಲಬುರ್ಗಿಯಲ್ಲಿ 141 ಮಟ್ಟ ದಾಖಲಾಗಿದೆ.

ಇದನ್ನೂ ಓದಿ:

WHO ಮಾನದಂಡಗಳ ಪ್ರಕಾರ 150ಕ್ಕಿಂತ ಮೇಲ್ಪಟ್ಟ AQI ಆರೋಗ್ಯಕ್ಕೆ ಹಾನಿಕರವಾಗಬಹುದು. ಕಳೆದ ವಾರ 100ರೊಳಗೆ ಇದ್ದ ಕೆಲವು ನಗರಗಳಲ್ಲಿ ಈಗ ಅಂಕಿ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ 0-50 ಉತ್ತಮ, 50-100 ಮಧ್ಯಮ, 100-150 ಕಳಪೆ, 150-200 ಅನಾರೋಗ್ಯಕರ, 200ಕ್ಕಿಂತ ಮೇಲು ಗಂಭೀರ ಮಟ್ಟವೆಂದು ಪರಿಗಣಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !