ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು, ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿದ್ದಾರೆ.
ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿದ್ದು, ಸಾಮಾನ್ಯ ಎಂಟ್ರಿ ಹಿನ್ನಲೆಯಲ್ಲಿ ಅರ್ಧ ತಾಸು ಮಾತ್ರವೇ ಜೈಲು ಅಧಿಕಾರಿಗಳು ನಟ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮಿಗೆ ಅವಕಾಶ ಮಾಡಿಕೊಟ್ಟರು.
ನಟ ದರ್ಶನ್ ಕುಶಲೋಪರಿ ವಿಚಾರಿಸಿದ ಪತ್ನಿ ವಿಜಯಲಕ್ಷ್ಮಿ ಬಳಿಯಲ್ಲಿ ಮಗನ ಬಗ್ಗೆ ನಟ ದರ್ಶನ್ ವಿಚಾರಿಸಿದರು ಎನ್ನಲಾಗಿದೆ.