ದಿನಭವಿಷ್ಯ: ನಿಮ್ಮ ಆಪ್ತರ ಜೊತೆ ಭಾವನೆ ಹಂಚಿಕೊಳ್ಳಲು ಹಿಂಜರಿಕೆ ಬೇಡ, ಸಮಾಧಾನ ಸಿಗಲಿದೆ

ಮೇಷ.
ಉದಾಸೀನತೆ ಈ ದಿನ ಕಾಡಬಹುದು. ಅದರಿಂದ ಕೆಲಸವೂ ನಿಧಾನವಾದೀತು. ಅವಿವಾಹಿತರಿಗೆ ಸಂಬಂಧ ಕೂಡಿಬರಬಹುದು.
ವೃಷಭ
ಕಠಿಣ ಶ್ರಮ, ಆತ್ಮವಿಶ್ವಾಸ ನಿಮ್ಮಿಂದ ಅಸಾಧ್ಯವಾದುದನ್ನೂ ಸಾಧ್ಯವಾಗಿಸಲಿದೆ. ನಿಮ್ಮ ವ್ಯಕ್ತಿತ್ವ  ಇತರರನ್ನು ಆಕರ್ಷಿಸಲಿದೆ.
ಮಿಥುನ
ಜಡವಾಗಿ ಕೂರದಿರಿ, ಕಾರ್ಯದಲ್ಲಿ ತೊಡಗಿ. ಅದೇ ಯಶಸ್ಸಿಗೆ ದಾರಿ. ಯೋಜನೆ ಇಲ್ಲದೆ ಹಣ ಹೂಡಬೇಡಿ. ದುಬಾರಿ ವಸ್ತು ಖರೀದಿ ಒಳಿತಲ್ಲ.
ಕಟಕ
ಆತ್ಮವಿಮರ್ಶೆಗೆ ಸಕಾಲ. ನಿಮಗೇನು ಬೇಕಾಗಿದೆ ಎಂದು ಸ್ಪಷ್ಟ ಮಾಡಿಕೊಳ್ಳಿ. ಆತ್ಮೀಯರ ಜತೆ ಪ್ರವಾಸ ಹೊರಡಿ.  ಚರ್ಮದ ಅಲರ್ಜಿ.
ಸಿಂಹ
ಉದ್ಯೋಗಕ್ಕೆ ಸಂಬಂಽಸಿ ಶುಭ ಸುದ್ದಿ. ಹೊಸ ವ್ಯಕ್ತಿಯ ಭೇಟಿ ಆತ್ಮೀಯ ಸಂಬಂಧಕ್ಕೆ ಕಾರಣವಾದೀತು. ಆರೋಗ್ಯಕ್ಕೆ ಗಮನ ಕೊಡಿ.
ಕನ್ಯಾ
ನಿಮ್ಮ ಭಾವನೆ ಆಪ್ತರ ಜತೆ ಹಂಚಿಕೊಳ್ಳಲು ಹಿಂಜರಿಕೆ ಬೇಡ. ಅವರಿಂದ ಸಮಾಧಾನ ಸಿಗಬಹುದು. ವ್ಯವಹಾರ ಸುಗಮವಾಗಿ ಸಾಗಲಿದೆ.
ತುಲಾ
ಏಕತಾನತೆಯ ಕೆಲಸ ಬೋರ್ ಎನಿಸಬಹುದು. ಹೊಸತನ ಬಯಸುವಿರಿ. ಆತ್ಮೀಯರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ. ಸಹನೆ ಕಳಕೊಳ್ಳದಿರಿ.
ವೃಶ್ಚಿಕ
ವ್ಯವಹಾರದಲ್ಲಿ ಎಚ್ಚರವಿರಲಿ. ಲೋಪ ಅಥವಾ ವಂಚನೆ ನಡೆದೀತು. ಖಾಸಗಿ ಬದುಕಲ್ಲಿ ಆದ್ಯತೆ ಬದಲಾಗಬಹುದು. ಸ್ವಾಸ್ಥ್ಯ ಸಮಸ್ಯೆ ಪರಿಹಾರ.
ಧನು
ಆರೋಗ್ಯದ ಬಗ್ಗೆ ಗಮನ ಕೊಡಿ. ದೇಹಾಭ್ಯಾಸ ಹೆಚ್ಚಿಸಿ. ಸಂಗಾತಿಯಿಂದ ಬೆಂಬಲ. ಸಂಬಂಧದ ಬಿಕ್ಕಟ್ಟು ಪರಿಹಾರ ಕಾಣುವುದು.
ಮಕರ
ವ್ಯವಹಾರದ ಒತ್ತಡ. ನಿಮ್ಮೊಂದಿಗಿನ ಜನರು ಸುಗಮ ವ್ಯವಹಾರಕ್ಕೆ ಆಸ್ಪದ ಕಲ್ಪಿಸುವರು. ಹಾಗಾಗಿ ಅನವಶ್ಯ ಚಿಂತೆ ಬಿಡಿ, ನೆಮ್ಮದಿಯಾಗಿರಿ.
ಕುಂಭ
ಒತ್ತಡ ಸೃಷ್ಟಿಸುವ ವ್ಯವಹಾರದಿಂದ ದೂರವಿರಿ. ಮನೆಯಲ್ಲಿ  ಮದುವೆ ನಿಕ್ಕಿಯಾದೀತು. ಆರೋಗ್ಯಕರ ಆಹಾರಕ್ಕೆ ಹೆಚ್ಚು ಆದ್ಯತೆ ಕೊಡಿ.
ಮೀನ
ಭಾವನಾತ್ಮಕ ಪರಿಸ್ಥಿತಿ ಎದುರಿಸುವಿರಿ. ಬಂಧುತ್ವಕ್ಕೆ ಧಕ್ಕೆ ತರುವ ಕಾರ್ಯ ಮಾಡಬೇಡಿ. ವಾಹನ ಚಾಲನೆಯಲ್ಲಿ ತುಸು ಎಚ್ಚರಿಕೆ ವಹಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!