ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶ್ ನಟನೆಯ ಬಿಗ್ ಸಿನಿಮಾ ಟಾಕ್ಸಿಕ್ಗೆ ನಟಿ ಕಿಯಾರಾ ಅಡ್ವಾಣಿ ಹೀರೋಯಿನ್. ಇದರ ಜೊತೆಗೆ ಸಾಕಷ್ಟು ಕ್ಯಾರೆಕ್ಟರ್ಸ್ ಕೂಡ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾಗೆ ಸದ್ಯ ನಮ್ಮ ಕನ್ನಡದ ಮುದ್ದಾದ ಹೀರೋಯಿನ್ ಒಬ್ಬರು ಎಂಟ್ರಿ ಕೊಟ್ಟಿದ್ದಾರೆ.
ಮತ್ಯಾರು ಅಲ್ಲ, ಸಪ್ತ ಸಾಗರದಾಚೆ ಸಿನಿಮಾ ಮೂಲಕ ಎಲ್ಲರ ಮನಗೆದ್ದಿದ್ದ ನಟಿ ರುಕ್ಮಿಣಿ ವಸಂತ್! ಹೌದು, ಸ್ವಲ್ಪ ದಿನದ ಹಿಂದಷ್ಟೇ ರುಕ್ಮಿಣಿ ವಸಂತ್ ಕಾಂತಾರ ಚಾಪ್ಟರ್ 1ನಲ್ಲಿ ಇದ್ದಾರೆ ಎಂದು ತಿಳಿದುಬಂದಿತ್ತು. ಇದೀಗ ಟಾಕ್ಸಿಕ್ನಲ್ಲಿಯೂ ರುಕ್ಮಿಣಿ ನಟಿಸಿದ್ದಾರೆ.
ಅಸಲಿಗೆ ರುಕ್ಮಿಣಿ ವಸಂತ್ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಕೆಲ ದಿನಗಳ ಚಿತ್ರೀಕರಣವನ್ನೂ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾದ ಒಂದು ಪ್ರಮುಖ ಪಾತ್ರಕ್ಕಾಗಿ ರುಕ್ಮಿಣಿ ವಸಂತ್ ಅವರನ್ನು ಕಾಸ್ಟ್ ಮಾಡಲಾಗಿದೆ. ರುಕ್ಮಿಣಿ ಅವರಿಗೆ ಹೆಚ್ಚು ಸ್ಕ್ರೀನ್ ಟೈಮ್ ಇರದೇ ಇದ್ದರು ಅವರ ಪಾತ್ರ ಕತೆಗೆ ಬಹಳ ಮಹತ್ವದ್ದಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರುಕ್ಮಿಣಿ ವಸಂತ್ ಅವರ ಪಾತ್ರದ ಬಗ್ಗೆ ‘ಟಾಕ್ಸಿಕ್’ ಚಿತ್ರತಂಡ ಇನ್ನಷ್ಟೆ ಅಧಿಕೃತ ಹೇಳಿಕೆ ನೀಡಬೇಕಿದೆ.