ಮಳೆ ಬಂದಿರೋದ್ರಿಂದ ವಾತಾವರಣ ಕೂಡ ತಂಪಾಗಿದೆ ಹೀಗಾಗಿ ಬಿಸಿಯಾದ ಆಹಾರಗಳ ಬೇಡಿಕೆ ಕೂಡಾ ಏರಿಕೆಯಾಗಿದೆ. ಇಂತಹ ಸಮಯದಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಸ್ವೀಟ್ ಕಾರ್ನ್ ಚಿಕನ್ ಸೂಪ್ ದೇಹಕ್ಕೆ ಬಿಸಿ ಅನುಭವ ನೀಡುವುದರ ಜೊತೆಗೆ ಶಕ್ತಿಯನ್ನೂ ಒದಗಿಸುತ್ತದೆ.
ಬೇಕಾಗುವ ಪದಾರ್ಥಗಳು
ಸ್ವೀಟ್ ಕಾರ್ನ್ – 1 ಕಪ್
ಚಿಕನ್ – 250 ಗ್ರಾಂ (ಸಣ್ಣ ತುಂಡುಗಳು)
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಉಪ್ಪು – 1½ ಟೀಸ್ಪೂನ್
ಮೊಟ್ಟೆ – 1
ವಿನೆಗರ್ – 1 ಟೇಬಲ್ ಸ್ಪೂನ್
ಸ್ಪ್ರಿಂಗ್ ಆನಿಯನ್ – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಕಾರ್ನ್ ಫ್ಲೋರ್ ಅನ್ನು ಅರ್ಧ ಕಪ್ ನೀರಿನಲ್ಲಿ ಚೆನ್ನಾಗಿ ಕರಗಿಸಿ ಪಕ್ಕಕ್ಕೆ ಇಡಿ. ಜೊತೆಗೆ ಸ್ವೀಟ್ ಕಾರ್ನ್ ಬೇಯಿಸಿಕೊಳ್ಳಿ. ಚಿಕನ್ನ್ನು ಬೇಯಿಸಿ ಸಣ್ಣದಾಗಿ ಉದ್ದ ಉದ್ದಕ್ಕೆ ಕಟ್ ಮಾಡಿಕೊಳ್ಳಿ. ಸ್ವೀಟ್ ಕಾರ್ನ್ನ್ನು ನೀರಿನಲ್ಲಿ ಹಾಕಿ ನೀರು ಕುದಿ ಬರುತ್ತಿದಂತೆ, ಕಾರ್ನ್ ಫ್ಲೋರ್ ಮಿಶ್ರಣ ಸೇರಿಸಿ ಸುಮಾರು 10 ನಿಮಿಷಗಳ ಕಾಲ ಬೇಯಿಸಿ. ನಂತರ ಉಪ್ಪು ಹಾಕಿ, ಚಿಕನ್ನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಸೂಪ್ ಕುದಿಯುತ್ತಿರುವಾಗ ಮೊಟ್ಟೆಯನ್ನು ಒಡೆದು ಹಾಕಿ ನಿಧಾನವಾಗಿ ಕದಡಿ. ಕೊನೆಯಲ್ಲಿ ವಿನೆಗರ್ ಸೇರಿಸಿ ಬಿಸಿಯಾಗಿ ಸರ್ವ್ ಮಾಡಿ. ಹೆಚ್ಚಿನ ರುಚಿಗೆ ಮೇಲಿಂದ ಹೆಚ್ಚಿದ ಸ್ಪ್ರಿಂಗ್ ಆನಿಯನ್ ಹಾಕಬಹುದು.