ಹೊಸದಿಗಂತ ಕಲಬುರಗಿ:
ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗುತ್ತಿದ್ದು,ಏತನ್ಮಧ್ಯೆ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಗಾಂವ್ ಹತ್ತಿರದ ಗಂಡೋರಿ ಜಲಾಶಯದಿಂದ ೨೨೩೦ ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗಿದೆ ಎಂದು ಜೆಇ ಸಂತೋಷ್ ರೆಡ್ಡಿ ತಿಳಿಸಿದರು.
ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಿರಂತರವಾದ ಮಳೆಯಿಂದಾಗಿ ಹೆಚ್ಚಿನ ಒಳಹರಿವು ಬರುತ್ತಿರುವುದರಿಂದ ಜಲಾಶಯದ ಕಾಲುವೆಗಳ ಮೂಲಕ ನೀರು ಹರಿಬಿಡುವ ಸಂಬಂವವಿದೆ ಎಂದರು.
ಜಲಾಶಯದಿಂದ ನದಿಗೆ ನೀರು ಹರಿಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ತೀರಕ್ಕೆ ಯಾರೂ ಹೋಗಬಾರದು,ದನಕರು ಬಿಡಬಾರದು ಹಾಗೂ ನದಿ ತೀರದ ರೈತರು ತಮ್ಮ ಸಾಮಾನುಗಳನ್ನು ಜೋಪಾನವಾಗಿಟ್ಟುಕೊಳ್ಳಬೇಕೆಂದು ತಹಶೀಲ್ದಾರ್ ಮಹಮ್ಮದ್ ಮೋಹಸಿನ್ ಸೂಚನೆ ನೀಡಿದ್ದಾರೆ.
ಸೋಮವಾರ ರಾತ್ರಿ ೨೦೦೦ ಕ್ಯೂಸೆಕ್ಸ್ ಗಿಂತ ಹೆಚ್ಚಿನ ಮಳೆ ನೀರು ಬಂದಿದ್ದು ೨೨೩೦ ಕ್ಯೂಸೆಕ್ಸ್ ನೀರು ಕಾಲುವೆಗಳ ಮೂಲಕ ಬಿಡುಗಡೆ ಮಾಡಲಾಗಿದೆ ಎಂದು ಜೆ ಸಂತೋಷ್ ರೆಡ್ಡಿ ತಿಳಿಸಿದ್ದಾರೆ.