ದ್ವೇಷ ಭಾಷಣ ಆರೋಪ | ಅಬ್ಬಾಸ್ ಅನ್ಸಾರಿಗೆ ಬಿಗ್ ರಿಲೀಫ್: ಮತ್ತೆ ಶಾಸಕ ಸ್ಥಾನಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಉತ್ತರ ಪ್ರದೇಶದ ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ ಅವರ ಪುತ್ರ, ಮಾಜಿ ಶಾಸಕ ಅಬ್ಬಾಸ್ ಅನ್ಸಾರಿಗೆ ಅಲಹಾಬಾದ್ ಹೈಕೋರ್ಟ್‌ ಗುರುವಾರ ಬಿಗ್ ರಿಲೀಫ್ ನೀಡಿದೆ.

2 ವರ್ಷ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತು. ಇದರೊಂದಿಗೆ ಮತ್ತೆ ಅವರಿಗೆ ಶಾಸಕ ಸ್ಥಾನಮಾನ ಕಲ್ಪಿಸಲಾಯಿತು.

2022 ರ ವಿಧಾನಸಭಾ ಚುನಾವಣೆಯ ಸಂದರ್ಭ ಮಾಡಿದ ದ್ವೇಷ ಭಾಷಣ ಹಿನ್ನೆಲೆಯಲ್ಲಿ ಮೌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೇ 31, 2025 ರಂದು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ರೂ 3,000 ದಂಡವನ್ನು ವಿಧಿಸಿತು. ಆ ಅಪರಾಧದ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನವನ್ನು ಜೂನ್ 1, 2025 ರಂದು ಕೊನೆಗೊಳಿಸಲಾಗಿತ್ತು.

ಜುಲೈ 5 ರಂದು ಮೌ ಜಿಲ್ಲಾ ನ್ಯಾಯಾಧೀಶರು ಮನವಿಯನ್ನು ತಿರಸ್ಕರಿಸಿದಾಗ ಅಬ್ಬಾಸ್ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಹೈಕೋರ್ಟ್ ಜುಲೈ 30ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇಂದಿನ ಹೈಕೋರ್ಟ್ ತೀರ್ಪಿನೊಂದಿಗೆ ಅಬ್ಬಾಸ್ ಅನ್ಸಾರಿ ಮತ್ತೆ ಶಾಸಕ ಸ್ಥಾನವನ್ನು ಪಡೆದರು. ಇದು ಮೌನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!