ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಶಂಕಿತ ವ್ಯಕ್ತಿಯನ್ನು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಬಂಧಿಸಲಾಗಿದೆ.
ಅನುಮಾನಾಸ್ಪದ ಚಟುವಟಿಕೆಗೆ ಮೊಬೈಲ್ ಬಳಕೆಯನ್ನು ಪರಿಶೀಲಿಸಿದ ಬಳಿಕ ಮಿಲಿಟರಿ ಗುಪ್ತಚರ ಸಿಬ್ಬಂದಿ ಸಂಕಡ ಪ್ರದೇಶದ ನಿವಾಸಿ ಜೀವನ್ ಖಾನ್ ಎಂಬಾತನನ್ನು ಮಿಲಿಟರಿ ಗುಪ್ತಚರ ಸಿಬ್ಬಂದಿ ಬಂಧಿಸಿದ್ದಾರೆ.
ಜೈಸಲ್ಮೇರ್‌ನ ಮಿಲಿಟರಿ ಪ್ರದೇಶದೊಳಗಿನ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂಕಡ ಪ್ರದೇಶದ ನಿವಾಸಿ ಜೀವನ್ ಖಾನ್ (30) ಎಂಬಾತನನ್ನು ಆಗಸ್ಟ್ 19 ರಂದು ಬಂಧಿಸಲಾಗಿದೆ. ಸೇನಾ ಠಾಣೆಗೆ ಮರಳಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಆತನನ್ನು ಗೇಟ್‌ನಲ್ಲಿ ತಡೆಹಿಡಿದು ತನಿಖೆ ನಡೆಸಿದ ಬಳಿಕ ಬಂಧಿಸಲಾಯಿತು.