ಹೊಸದಿಗಂತ ವರದಿ, ಶಿರಸಿ :
ತಾಲ್ಲೂಕು ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಪತ್ರಕರ್ತರಿಗೆ ನೀಡುವ ದತ್ತಿ ನಿಧಿ ಪ್ರಶಸ್ತಿಯನ್ನು ಬನವಾಸಿಯ ಹೊಸದಿಗಂತ ದಿನಪತ್ರಿಕೆಯ ವರದಿಗಾರ ಸುಧೀರ ನಾಯರ್ ಅವರಿಗೆ ಘೋಷಿಸಲಾಗಿದೆ.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ನೇತೃತ್ವದಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ. ಆ. 31ರಂದು ಹಮ್ಮಿಕೊಂಡಿರುವ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಗಿರಿಧರ ಕಬ್ನಳ್ಳಿ ಅವರು ತಮ್ಮ ಪಾಲಕರ ನೆನಪಿಗಾಗಿ ನೀಡುತ್ತಿರುವ ಕಬ್ನಳ್ಳಿ ದಿ.ಸರೋಜಾ ಮತ್ತು ಛತ್ರಪತಿ ಹೆಗಡೆ ದತ್ತಿನಿಧಿ ಪುರಸ್ಕಾರ ವಿತರಿಸಲಾಗುವುದು ಎಂದು ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ
ತಿಳಿಸಿದ್ದಾರೆ.