ಭಾರತದ ಋಷಿ-ಮುನಿಗಳು ಸಾವಿರಾರು ವರ್ಷಗಳ ಹಿಂದೆ ಅನುಸರಿಸಿದ ಯೋಗ ಇಂದು ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಕೇವಲ ವ್ಯಾಯಾಮವಲ್ಲದೆ, ಬದುಕಿನ ಸಮಗ್ರ ತತ್ವವನ್ನು ಒಳಗೊಂಡಿರುವ ಯೋಗವು ಆರೋಗ್ಯ, ದೀರ್ಘಾಯುಷ್ಯ ಮತ್ತು ಶಾಂತಿಯ ಜೀವನಕ್ಕೆ ಕಾರಣವಾಗಿದೆ.
ಯೋಗದ ಪ್ರಮುಖ ಪ್ರಯೋಜನಗಳು:
ರಕ್ತಸಂಚಲನ ಸುಧಾರಣೆ
ಯೋಗಾಸನ ಮಾಡುವುದರಿಂದ ದೇಹದ ನರನಾಡಿಗಳು ಚುರುಕಾಗುತ್ತವೆ. ರಕ್ತಸಂಚಲನ ಸರಾಗವಾಗಿ ನಡೆಯುತ್ತದೆ ಮತ್ತು ದೇಹದ ಪ್ರತಿಯೊಂದು ಅಂಗ ಆರೋಗ್ಯಕರವಾಗಿರುತ್ತದೆ.
ಬೊಜ್ಜು ಕರಗಿಸಿ ದೇಹವನ್ನು ದೃಢಗೊಳಿಸುವುದು
ನೌಕಾಸನ, ಉಷ್ಟ್ರಾಸನದಂತಹ ಆಸನಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತವೆ. ನಿಯಮಿತ ಯೋಗದಿಂದ ದೇಹ ಆಕರ್ಷಕವಾಗುತ್ತದೆ.
ಮನಸ್ಸಿಗೆ ಶಾಂತಿ
ಪ್ರಾಣಾಯಾಮ, ಅನುಲೋಮ-ವಿಲೋಮ ಮೊದಲಾದ ಉಸಿರಾಟದ ವ್ಯಾಯಾಮಗಳಿಂದ ಒತ್ತಡ ಕಡಿಮೆಯಾಗುತ್ತದೆ. ಇದು ಹೃದಯದ ಆರೋಗ್ಯಕ್ಕೂ ಸಹಕಾರಿ.
ಶ್ವಾಸಕೋಶ ಬಲಪಡಿಸುವುದು
ನಿಧಾನ ಮತ್ತು ಧೀರ್ಘ ಉಸಿರಾಟದ ಆಸನಗಳಿಂದ ಶ್ವಾಸಕೋಶ ಶಕ್ತಿಶಾಲಿಯಾಗುತ್ತದೆ. ರಕ್ತದ ಒತ್ತಡ, ಕೊಲೆಸ್ಟ್ರಾಲ್ ಹತೋಟಿಗೆ ಬರುತ್ತದೆ.
ಸ್ನಾಯು ಮತ್ತು ಕೀಲುಗಳ ಆರೋಗ್ಯ
ಯೋಗದಿಂದ ಸ್ನಾಯುಗಳು ದೃಢವಾಗುತ್ತವೆ. ಕೀಲು ನೋವು, ಸ್ನಾಯು ಸೆಳೆತ ಕಡಿಮೆಯಾಗುತ್ತದೆ ಮತ್ತು ದೇಹ ಚುರುಕಾಗುತ್ತದೆ.
ಭಾರತದಿಂದ ಪ್ರಾರಂಭವಾದ ಯೋಗವು ಇಂದು ಇಡೀ ವಿಶ್ವದ ಜೀವನಶೈಲಿಯ ಭಾಗವಾಗಿದೆ. ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಸಮತೋಲನ ನೀಡುವ ಯೋಗವನ್ನು ಪ್ರತಿದಿನ ಅಳವಡಿಸಿಕೊಂಡರೆ ಸಮೃದ್ಧ, ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಬಹುದು.