ಬೆಳಗಿನ ಉಪಹಾರದಲ್ಲಿ ದೋಸೆ ಬಹುತೇಕ ಮನೆಗಳಲ್ಲಿ ಮೆಚ್ಚಿನ ತಿನಿಸು. ಸಾಮಾನ್ಯವಾಗಿ ಉದ್ದಿನ ಬೇಳೆ ಮತ್ತು ಅಕ್ಕಿಯಿಂದ ಮಾಡುವ ದೋಸೆಯೇ ಜನಪ್ರಿಯ. ಆದರೆ, ಸಬ್ಬಕ್ಕಿಯಿಂದ (ಸಾಬುದಾನಿ) ತಯಾರಿಸುವ ದೋಸೆಯೂ ಅಷ್ಟೇ ರುಚಿಕರವಾಗಿದ್ದು, ತ್ವರಿತವಾಗಿ ಮಾಡಬಹುದಾದ ವಿಶೇಷ ಉಪಹಾರವಾಗಿದೆ.
ಬೇಕಾಗುವ ಪದಾರ್ಥಗಳು
ಒಂದು ಕಪ್ ಸಬ್ಬಕ್ಕಿ (ಸಾಬುದಾನಿ)
ಒಂದು ಕಪ್ ಅಕ್ಕಿ
ಒಂದು ಕಪ್ ಮೊಸರು
ರುಚಿಗೆ ತಕ್ಕಷ್ಟು ಉಪ್ಪು
ಕಾಲು ಟೀಸ್ಪೂನ್ ಅಡುಗೆ ಸೋಡಾ
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ತೊಳೆದು, ಮೊಸರು ಮತ್ತು ಸ್ವಲ್ಪ ನೀರು ಸೇರಿಸಿ ಎರಡು ಗಂಟೆಗಳ ಕಾಲ ನೆನೆಸಿಡಬೇಕು. ಸಬ್ಬಕ್ಕಿಯನ್ನೂ ಸ್ವಚ್ಛಗೊಳಿಸಿ ನೀರಿನಲ್ಲಿ ನೆನೆಸಿಡಬೇಕು. ಬಳಿಕ ಮಿಕ್ಸರ್‌ನಲ್ಲಿ ಸಬ್ಬಕ್ಕಿ ಮತ್ತು ಅಕ್ಕಿಯನ್ನು ನುಣ್ಣಗೆ ರುಬ್ಬಿ, ಪೇಸ್ಟ್ ಮಾಡಿದ ನಂತರ ಉಪ್ಪು ಮತ್ತು ಸ್ವಲ್ಪ ಅಡುಗೆ ಸೋಡಾ ಸೇರಿಸಿ ಕಲಸಿಕೊಳ್ಳಬೇಕು. ನಂತರ ಬಿಸಿ ಪ್ಯಾನ್ ಮೇಲೆ ದೋಸೆ ಹಾಕಿ ಎರಡು ಬದಿ ಬೇಯಿಸಿಕೊಂಡರೆ ಸಬ್ಬಕ್ಕಿ ದೋಸೆ ರೆಡಿ.