ಮೇಷ
ಸಿಗುವ ಅವಕಾಶ ಸರಿಯಾಗಿ ಬಳಸಿಕೊಳ್ಳಿ. ಸುಲಭ ಹಣ ಗಳಿಕೆಯ ಹಾದಿ ತುಳಿಯದಿರಿ. ಅದರಲ್ಲಿ ಅಪಾಯವಿದೆ. ಆರ್ಥಿಕ ಚೇತರಿಕೆ.
ವೃಷಭ
ಕುಟುಂಬದ ಜತೆ ಆತ್ಮೀಯ ಕಾಲಕ್ಷೇಪ. ಸ್ವಂತ ಉದ್ಯೋಗಿಗಳಿಗೆ ಹಣ ಗಳಿಕೆಯ ಹಾದಿ ತೋರಲಿದೆ. ಕಠಿಣ ಶ್ರಮಕ್ಕೆ ಸೂಕ್ತ ಪ್ರತಿ-ಲ ಲಭ್ಯ.
ಮಿಥುನ
ವೃತ್ತಿಯಲ್ಲಿ ಯಶ. ಹಿರಿಯರ ಸಹಕಾರ ಮತ್ತು ನಿಮ್ಮ ಪ್ರಯತ್ನ ಅದಕ್ಕೆ ಕಾರಣ. ಪ್ರೀತಿಯಲ್ಲಿ ಪೂರಕ ಬೆಳವಣಿಗೆ. ದೈಹಿಕ ಸ್ವಾಸ್ಥಕ್ಕೆ ಆದ್ಯತೆ ಕೊಡಿ.
ಕಟಕ
ಸಂಗಾತಿ ಜತೆಗೆ ಹೊಂದಾಣಿಕೆ ಕೊರತೆ. ವೃತ್ತಿಯಲ್ಲಿ ಆದಾಯಕ್ಕೆ ಅಡಚಣೆ. ಆರೋಗ್ಯಕರ ಆಹಾರವಷ್ಟೆ ಸೇವಿಸಿ. ಶೀತಸಂಬಂಧ ಕಿರಿಕಿರಿ. ಸಿಂಹ
ನಿಂತ ನೀರಾಗಬೇಡಿ. ಪರಿಸ್ಥಿತಿಗೆ ತಕ್ಕಂತೆ ನಿಮ್ಮನ್ನೂ ಹೊಂದಾಣಿಕೆ ಮಾಡಿಕೊಳ್ಳಿ. ಕೌಟುಂಬಿಕ ಕಟ್ಟುಪಾಡು ಮುರಿಯುವ ಅಗತ್ಯ ಬೀಳಬಹುದು.
ಕನ್ಯಾ
ಪ್ರೀತಿಪಾತ್ರರ ಸಂಗದಲ್ಲಿ ಕಾಲ ಕಳೆಯುವ ಅವಕಾಶ. ಧನಪ್ರಾಪ್ತಿ. ಸಾಲ ತೀರಿಸುವ ಅವಕಾಶ. ವೃತ್ತಿಯಲ್ಲಿ ಉನ್ನತಿ. ಕೌಟುಂಬಿಕ ಸಹಕಾರ.
ತುಲಾ
ಭಾವನಾತ್ಮಕ ಸಂಘರ್ಷಕ್ಕೆ ಇಂದು ಸಾಕ್ಷಿಯಾಗುವಿರಿ. ವಿವೇಕದ ನಡೆ ಅವಶ್ಯ. ಮೆಚ್ಚಿನ ಹವ್ಯಾಸದಲ್ಲಿ ನೆಮ್ಮದಿ ಹುಡುಕುವಿರಿ.
ವೃಶ್ಚಿಕ
ಹಣದ ವಿಚಾರದಲ್ಲಿ ಅನಪೇಕ್ಷಿತ ಪ್ರಸಂಗ ಉಂಟಾದೀತು. ನಿಷಲ ವಸ್ತು ಖರೀದಿಗೆ ಹೋಗದಿರಿ. ವಾದದಿಂದ ಕೌಟುಂಬಿಕ ಅಶಾಂತಿ.
ಧನು
ಹಳೆಯ ಬಂಧ ಮತ್ತೆ ಕೂಡಿಕೊಂಡೀತು. ಆಪ್ತತೆಯ ಭಾವ ಅನುಭವಿಸುವಿರಿ. ವೃತ್ತಿ ಸಮಸ್ಯೆಯಿಂದ ಮುಕ್ತಿ ದೊರಕಲಿದೆ.
ಮಕರ
ನಿಮ್ಮ ಉದ್ದೇಶ ಈಡೇರಲು ಹೆಚ್ಚಿನ ಶ್ರಮದ ಅಗತ್ಯ ಬೀಳಲಿದೆ. ನಂಬಿದ ವ್ಯಕ್ತಿಯಿಂದ ವಿಶ್ವಾಸದ್ರೋಹ ಆದೀತು. ಎಚ್ಚರದಿಂದಿರಿ.
ಕುಂಭ
ಸಾಮಾಜಿಕ ಸಂಪರ್ಕ ಹೆಚ್ಚು ಸಾಧಿಸಿರಿ. ಏಕಾಂತದಿಂದ ಹೊರಬನ್ನಿ. ಬಾಂಧವ್ಯದ ಬಿಕ್ಕಟ್ಟು ಪರಿಹರಿಸಿಕೊಳ್ಳಿ. ಸೂಕ್ತ ನೆರವು ಒದಗಲಿದೆ.
ಮೀನ
ಸಣ್ಣ ವಿಷಯಕ್ಕೂ ಬೇಗನೇ ರೇಗುವಿರಿ. ಅದನ್ನು ನಿಯಂತ್ರಿಸಿ. ನಿಮ್ಮನ್ನು ಇತರರು ದುರ್ಬಳಕೆ ಮಾಡಲು ಅವಕಾಶ ಕೊಡದಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ